SUDDILIVE || SHIVAMOGGA
ಗ್ಯಾಸ್ ಬಂಕ್ ಗಳಲ್ಲಿ ಮನಸ್ಸೋ ಇಚ್ಛೆ ದರ ಹೆಚ್ಚಳ ಕಾರ್ಮಿಕ ಸಂಘಟನೆ ಮನವಿ- Labor unions appeal for price hike at gas stations
ಗ್ಯಾಸ್ ಬಂಕ್‌ಗಳಲ್ಲಿ ಮನಸ್ಸಿಗೆ ಬಂದಹಾಗೆ ದರ ನಿಗದಿ ಮಾಡಿ ಸಾರ್ವಜನಿಕರಿಂದ ವಸೂಲಿ ಮಾಡುತ್ತಿರುವ ಬಗ್ಗೆ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದಲ್ಲಿ ಆಟೋ ಚಾಲಕರು ದಿನ ನಿತ್ಯ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಯುದ್ಧ ಶುರುವಾಗಿ 36 ನೇ ದಿನ ಕಳೆದಿದೆ. ಯುದ್ಧ ಇವತ್ತು ಸರಿಯಾಗುತ್ತೆ ನಾಳೆ ಸರಿಯಾಗುತ್ತೆ ಅಂತ ದಿನ ಕಳೆಯುತ್ತಾ ನಾವುಗಳು ಆಟೋ ಚಾಲಕರು ದಿನೇ ದಿನೇ 10ರೂ, 20ರೂ, 30ರೂ, 40 ರೂಪಾಯಿಗಳ ತನಕ ಗ್ಯಾಸ್ ಬೆಲೆ ಏರಿಯಾಗುತ್ತಿದೆ.
ಇಲ್ಲಿಯವರೆಗೆ ಎಂ.ಪಿ ಯಾಗಲೀ, ಎಂ.ಎಲ್.ಎ ಆಗಲೀ, ಎಂ.ಎಲ್.ಸಿ ಗಳಾಗಲೀ ಜನಪ್ರತಿನಿಧಿಗಳಾಗಲಿ, ಚಾಲಕರ ಬಗ್ಗೆ ಗಮನಹರಿಸದೇ ಮತ್ತು ಈ ಬೆಲೆ ಏರಿಕೆಯಲ್ಲಿ ಮೋಟಾರ್ ಬಾಡಿಗೆ, ಮೀಟರ್ ಬಾಡಿಗೆಗೆ, ಪ್ರೀಪೇಡ್ ಬಾಡಿಗೆಗೆ ಸೇವೆ ಕೊಡಲು ಸಾಧ್ಯವೇ ಜನಗಳು ಸಹ 10 ರೂ ಹೆಚ್ಚಿಗೆ ಕೊಟ್ಟು ಸಹಕರಿಸುವುದಿಲ್ಲ. ಎಫ್.ಸಿ ನೋಡಿದರೆ 3 ಭಾಗದಷ್ಟು ಹೆಚ್ಚಾಗಿದೆ. ಇನ್ಸೂರೆನ್ಸ್ ಬಿಡಿಭಾಗಗಳು, ಮೆಕಾನಿಕ್ ದರ ಹಾಗೆ ಹಾಲು, ತರಕಾರಿ, ಅಕ್ಕಿ, ಎಣ್ಣೆ, ಬೇಳೆ-ಕಾಳು, ಬಸ್‌ದರ, ರೈಲು ದರ, ದಿನಸಿ ಪದಾರ್ಥಗಳು, ಕೆ.ಇ.ಬಿ ಬಿಲ್ಲು, ನೀರಿನ ಬಿಲ್ಲು, ಯು.ಜಿ.ಡಿ., ಮನೆ ಕಂದಾಯ, ಪ್ರತಿಯೊಂದರ ದರ ಹೆಚ್ಚಾಗಿ ಆಗಿ ಜೀವನ ಮಾಡುವುದು ಕಷ್ಟವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ನೌಕರರ ಸಂಬಳ ಮಾತ್ರ ಪ್ರತಿ ತಿಂಗಳು ಸರಿಯಾಗಿ ಸಿಗುವುದರಿಂದ ಅವರುಗಳು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಆದರೆ ಬಡ ಆಟೋ ಚಾಲಕರ ಪಾಡು 40 ರೂಪಾಯಿ ಹೆಚ್ಚಿಗೆ ಆಗಿದ್ದರೂ ಆಟೋ ಸೇವೆ ಅದೇ ದರಕ್ಕೆ ಕೊಡಬೇಕು. ಇದು ಯಾವ ನ್ಯಾಯ? ಚಾಲಕರ ಕಷ್ಟ ಹೇಳುವುದಕ್ಕೆ ಆಗುತ್ತಿಲ್ಲ. ನಾವುಗಳು ಬಾಡಿಗೆ ಮನೆಯಲ್ಲಿ ಜೀವನ ಮಾಡಬೇಕೋ? ಬೇಡವೋ? ಮನೆಯಲ್ಲಿ ವಯಸ್ಸಾದ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಅಕ್ಕ-ತಂಗಿಯರನ್ನು ಈ ದುಡಿಮೆಯಲ್ಲಿ ಹೇಗೆ ಸಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಶಾಸಕರುಗಳು ಈ ಆಟೋ ಚಾಲಕರ ಕಷ್ಟಗಳನ್ನ ಅರ್ಥ ಮಾಡಿಕೊಂಡು ಗ್ಯಾಸ್ ಕೊಂಚ ಸಡಿಲಿಕೆ ಮಾಡುವಂಡುವಂತೆ ಆಗ್ರಹಿಸಲಾಯಿತು. ಮನವಿ ಸಲ್ಲಿಸುವ ವೇಳೆ, ಸಂಘಟನೆಯ ರಾಜ್ಯಾಧ್ಯಕ್ಷ ಸತೀಶ್ ಹೆಚ್ (ದೇವು) ಹಾಗೂ ಇತರರು ಉಪಸ್ಥಿತರಿದ್ದರು.
Labor unions appeal for price hike at gas stations

