SUDDILIVE || BHADRAVATHI
ಹಾರಿತು ಡ್ರೋಣ್ ಬಿತ್ತು ಕೇಸ್-Drone crash case
ಭದ್ರಾವತಿ ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳ ದಂಧೆ ಕೇಳಿಬರುತ್ತಿದ್ದ ಬಗ್ಗೆ ಸಾರ್ವಜನಿಕರ ಅಹವಾಲು ಕೇಳಿ ಬರುತ್ತಿತ್ತು. ಈಗ ಅಂತಹ ದಂಧೆಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಡ್ರೋಣ್ ಹಾರಿಸಿ 19 ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕೂಗಿ ಕೇಳಿ ಬರುತ್ತಿದ್ದು ಅಲ್ಲಿ ಹೋಗಿ ಸುದ್ದಿ ಮಾಡಲು ಸಾಧ್ಯವಿರದ ಪರಿಸ್ಥಿತಿಯಲ್ಲಿ ಮಾಧ್ಯಮಗಳಿದ್ದರೆ, ಪೊಲೀಸರ ವಿರುದ್ಧವೇ ಇಂತಹ ದಂಧೆಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ ದಾಳಿ ನಡೆಯೊಲ್ಲ ಎಂಬ ಅಸಮಾಧಾನ ಮತ್ತು ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದ್ದವು.
ಈಗ ಎಸ್ಪಿ ನಿಖಿಲ್ ಅವರ ಖಡಕ್ ಸೂಚನೆ ಅಡಿಯಲ್ಲಿ ಪ್ರಥಮ ಬಾರಿಗೆ ದ್ರೋಣ್ ಹಾರಿಸಲಾಗಿದೆ. ಒಂದು ಶಿವಮೊಗ್ಗ ಗ್ರಾಮಾಂತರ ಭಾಗವಾದ ರಾಗಿಗುಡ್ಡದಲ್ಲಿ ಡ್ರೋಣ್ ಹಾರಿದರೆ, ಭದ್ರಾವತಿ ಗ್ರಾಮಾಂತರ ಭಾಗವಾದ ಕೂಡ್ಲಿಗೆರೆಯ ಅರಣ್ಯ ಪ್ರದೇಶಗಳಲ್ಲಿ ಡ್ರೋಣ್ ಹಾರಿವೆ.
ರಾಗಿಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಜರುಗಿಸಲು ಡ್ರೋಣ್ ಹಾರಿಸಲಾಗಿತ್ತು. ಈಗ ಭದ್ರಾವತಿಯ ಕೂಡ್ಲಿಗೆರೆಯಲ್ಲಿ ಡ್ರೋಣ್ ಹಾರಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ 19 ಜನರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಲ್ಲಾಪುರ, ಕಲ್ಯಲಾ, ತಟ್ಟೆಹಳ್ಳಿ ಭಾಗದಲ್ಲಿ ಹಗಲು ರಾತ್ರಿ ತೂರಬಿಲ್ಲೆ ಆಟ ನಡೆಯುತ್ತದೆ ಎಂಬುದರ ಬಗ್ಗೆ ಸುದ್ದಿ ಮಾಡಲಾಗಿತ್ತು. ಇಲ್ಲಿ ಯಾವಾಗ ಡ್ರೋಣ್ ಹಾರುತ್ತೆ? ದೂರುದಾಖಲಾಗುತ್ತೆ ಕಾದು ನೋಡಬೇಕಿದೆ.
Drone crash case
