ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿಯ ಬಂಧನ-Accused arrested for snatching Mangalya's necklace

SUDDILIVE || SHIVAMOGGA

ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿಯ ಬಂಧನ-Accused arrested for snatching Mangalya's necklace    

Chain, snatch


ಎದುರಿನಿಂದ ನಡೆದುಕೊಂಡು ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ 35 ಗ್ರಾಂ ಚಿನ್ನಾಭರಣ ಕಳುವು ಮಾಡಿ ಬೈಕ್ ನಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿ ಆತನಿಂದ ಚಿನ್ನಾಭರಣವನ್ನ‌ ವಶಕ್ಕೆ ಪಡೆದಿದ್ದಾರೆ. 

ದಿನಾಂಕ:25-04-2026 ರಂದು ಬೆಳಿಗ್ಗೆ ಶಿವಮೊಗ್ಗ ನಗರದ ವಾಸಿ ಮಹಿಳೆಯರಿಬ್ಬರು ಹೊಳಲೂರು ಗ್ರಾಮ ಪಂಚಾಯ್ತಿಯ ಮಹಿಳಾ ಸಂಘದ ಸಭೆಗೆ ಹೊರಟು, ಹೊಳಲೂರು ಸರ್ಕಾರಿ ಆಸ್ಪತ್ರೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬನು ಮಹಿಳೆಯ ಕೊರಳಿನಲಿದ್ದ ಸುಮಾರು 35 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್ ನಲ್ಲಿ  ಪರಾರಿಯಾಗಿ ತಲೆ ಮರೆಸಿಕೊಂಡಿದ್ದು, ಈ ಬಗ್ಗೆ  ಶಿವಮೊಗ್ಗ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 

ಪ್ರಕರಣದ ಆರೋಪಿತರ ಪತ್ತೆಗಾಗಿ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್  ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ,  ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ  ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ,  ಶಿವಮೊಗ್ಗ, ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ & ಸಿಬ್ಬಂದಿಗಳಾದ ಎಎಸ್ಐ ವಿಜಯ, ಸಿಹೆಚ್.ಸಿ ಕಲ್ಲನಗೌಡ, ಕುಮಾರ್ ಬಣಕಾರ್, ದಾಕ್ಷಾಯಣಿ, ರಾಘವೇಂದ್ರ, ಸಿಪಿಸಿ ಶ್ರೀಕಾಂತ್, ಕಾಶಿನಾಥ, ಕವನ ರವರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ. 

ತನಿಖಾ ತಂಡವು ಈ ದಿನ ದಿನಾಂಕ: 26-04-2026 ರಂದು ಸರಗಳ್ಳತನ ಮಾಡಿದ ಆರೋಪಿತರಾದ 1) ಮನೋಜ್ ಶಿರಮಣ ಸಿ ಮತ್ತು 2) ವಿಜಯ್ ಕುಮಾರ್ ಇವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು 40,000/- ರೂ ಮೌಲ್ಯದ ಸ್ಪ್ಲೆಂಡರ್ ಬೈಕ್ ಹಾಗೂ  ಅಂದಾಜು  2,50,000/-ರೂ ಮೌಲ್ಯದ 18ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡು , ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Accused arrested for snatching Mangalya's necklace

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close