SUDDILIVE || SAGARA
ಕೆಎಫ್ ಡಿಗೆ ವೃದ್ದ ಬಲಿ- Elderly victim of KFD
ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸಿದ್ದಾಪುರದ ಮನ್ಮನೆ ಗ್ರಾಮದ 72 ವರ್ಷ ವಯಸ್ಸಿನ ಮಂಜಪ್ಪ ಅವರು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಏ.4 ರಂದು ಚಿಕಿತ್ಸೆಗೆ ಬಂದು ದಾಖಲಾಗಿದ್ದರು. ಏ.1 ಎಂದು ಮಂಜಪದಪರಿಗೆ ವಾಂತಿ ಭೇಧಿ ಶುರುವಾಗಿತ್ತು. ನಿಲ್ಲದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದು ಅವರ ರಕ್ತದ ಸ್ಯಾಂಪಲ್ಸ್ ಕಳುಹಿಸಿದಾಗ ಅವರಿಗೆ ಕೆಎಫ್ ಡಿ ಧೃಢಪಟ್ಟಿದೆ.
ವೈದ್ಯರು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದರು.ಬುಧವಾರ ಬೆಳಗ್ಗೆ ಎರಡು ಬಾರಿ ಹೃದಯಾಘಾತವಾಗಿ ಮಂಜಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಜ್ವರಪೀಡಿತರು ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂಬ ಮಾಹಿತಿ ಇದೆ.
Elderly victim of KFD
