SUDDILIVE || SHIVAMOGGA
ನಗರದಲ್ಲಿ ನೀರು ಸರಬರಾಜಾಗುತ್ತಿರುವ ಬಗ್ಗೆ ಸಮಗ್ರ ತನಿಖೆಗೆ ಜಯಕರ್ನಾಟಕ ಜನಪರ ವೇದಿಕೆ ಆಗ್ರಹ-Jayakarnataka Janapara Vedike demands a comprehensive investigation into the excessive water supply
ನಗರದಲ್ಲಿ ಸಮರ್ಪಕ ನೀರು ಪೂರೈಸದೆ ಜನತೆಗೆ 24×7 ಯೋಜನೆಯನ್ನ ಸರಬರಾಜು ಮಾಡುತ್ತಿರುವ ಜಲ ಮಂಡಳಿ ಮತ್ತು ನಗರ ಪಾಲಿಕೆ ಮೋಸ ಮಾಡುತ್ತಿದ್ದು ಕಲುಪಿತವಾಗಿರುವ ನೀರನ್ನು ಪೂರೈಸುತ್ತಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಬಿ.ಎ.ಸುರೇಶ್ ಶೆಟ್ಟಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕಾಲರ ಹಾಗೂ ಸೇವೆಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಕಾರಣವಾದರೇ ಇದಕ್ಕೆ ಜಿಲ್ಲಾಡಳಿತಗಳು ನೇರ ಹೊಣೆ ಎಂದು ಆಗ್ರಹಿಸಿರುವ ಸಂಘಟನೆ ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಸಂಬಂಧ ಪಟ್ಟಾಧಿಕಾರಿಗಳಿಗೆ ನೋಟಿಸ್ ನೀಡಬೇಕು ನೀರು ಶುದ್ಧೀಕರಣಕ್ಕೆ ಮುಖ್ಯವಾಗಿ ಬಳಸುವ ಅಲಂಕಾರ ಇದೆಯಾ ಮತ್ತು ನೀರನ್ನು ಶುದ್ಧಗೊಳಿಸುವ ಇದರ ಉಪಯೋಗ ನಡೆಯುತ್ತಿದೆಯಾ ಎಂದು ಪರೀಕ್ಷೆ ಮಾಡಬೇಕೆಂದು ಸಂಘಟನೆ ಒಟ್ಟು ಹಿಡಿದಿದೆ.
ಸರಬರಾಜಾಗುತ್ತಿರುವ ನೀರಿಗೆ ಕ್ಲೋರಿನ್ ಮಾತ್ರೆಗಳನ್ನು ಬಳಸಿ ಹಾನಿಕಾರಕ ಜೀವಿಗಳನ್ನು ಕೊಲ್ಲಬೇಕು. ಅಯೋಡೀನ್ ಟೆಂಚರ್ ಮಾತ್ರೆ ಬಳಸಲಾಗುತ್ತಿದೆಯಾ ಎಂದು ತಪಾಸಣೆ ನಡೆಸಬೇಕು. ಈ ವಸ್ತುಗಳ ಪೂರೈಕೆಗೆ ಟೆಂಡರ್ ಕರೆಯಲಾಗಿದೆಯಾ ಮತ್ತು ಎಷ್ಟು ಸಂಖ್ಯೆಯಲ್ಲಿ ಪೂರೈಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
Jayakarnataka Janapara Vedike demands a comprehensive investigation into the excessive water supply
