SUDDILIVE || SHIVAMOGGA
ಆಶ್ರಯ ಬಡಾವಣೆಗಳಿಗೆ ಎಸ್ ಬಂಗಾರಪ್ಪ ಬಡಾವಣೆ ಎಂದು ನಾಮಕರಣ-ಅಚ್ಚರಿ ಮೂಡಿಸಿದ ಸರ್ಕಾರದ ನಡೆ-Surprising move by the government to name the Ashraya as S Bangarappa Layouts
ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ಬಡಾವಣೆಗಳನ್ನ ಎಸ್. ಬಂಗಾರಪ್ಪ ಬಡಾವಣೆ ಎಂದು ಬದಲಿಸಿ ರಾಜ್ಯ ಸರ್ಕಾರ ಆದೇಶಿದೆ. ಇದರಿಂದ ಈ ಹಿಂದೆ ರಾಜಕೀಯ ನಾಯಕರ ಹೆಸರನ್ನೇ ಬಡಾವಣೆಗೆ ಇಡುವ ಚಾಳಿಯನ್ನ ಕಾಂಗ್ರೆಸ್ ಸರ್ಕಾರ ಮುಂದುವರೆಸಿರುವುದು ಅಚ್ಚರಿ ಮೂಡಿಸಿದೆ.
ನಾಮ್ ಮೇ ಕ್ಯಾ ರಕ್ಕಾಹೈ, ಕಾಮ್ ಮೆ ದಿಕ್ನಾಹೈ ಎಂಬ ಹಿಂದಿಯ ನಾಣ್ನುಡಿಯನ್ನೂ ಸರ್ಕಾರ ನಾಚಿಸುವಂತೆ ಮಾಡಿದೆ. ಸರ್ಕಾರದ ಬಡಾವಣೆಗಳಿಗೆ ರಾಜಕೀಯ ನಾಯಕರ ಹೆಸರು ಇಡಬಾರದು ಎಂಬ ಧ್ಯೇಯದೊಂದಿಗೆ ಅಂದು ಜನರಿಗೆ ಆಶ್ರಯವಾಗುವ ಬಡಾವಣೆಗೆ ಆಶ್ರಯ ಬಡಾವಣೆ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿತ್ತು.
ಈ ಧ್ಯೇಯಗಳಿಗೆ ಸರ್ಕಾರ ತಿಲಾಂಜಲಿ ಇಟ್ಟು ಶಿವಮೊಗ್ಗದ ಆಶ್ರಯ ಬಡಾವಣೆಗಳಿಗೆ ಎಸ್.ಬಂಗಾರಪ್ಪ ಎಂದು ನಾನಕರಣ ಮಾಡಿ ಆದೇಶಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಆಶ್ರಯ ಬಡಾವಣೆಗಳು ಸರ್ಕಾರದ ಪುಟದಲ್ಲಿ ಎಸ್ ಬಂಗಾರಪ್ಪ ಬಡಾವಣೆ ಎಂದು ಬರೆಯಲು ಆದೇಶಿಸಲಾಗಿದೆ.
Surprising move by the government to name the Ashraya as S Bangarappa Layouts
