SUDDILIVE || SORABA
N.ಸಾಗದ್ದೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ, ಅಡಿಕೆ, ಬಾಳೆ ಹಾನಿ- Electricity pole falls across road in N. Sagadde, damages areca nuts, bananas
ಸೊರಬ ತಾಲೂಕು N.ಸಾಗದ್ದೆಯಲ್ಲಿ ನಿನ್ನೆ ಗಾಳಿ, ಸಿಡಿಲು ಮಿಂಚು ಸಮೇತ ಮಳೆಯಾಗಿದ್ದು ಅನೇಕ ಅನಾಹುತಗಳನ್ನ ಸೃಷ್ಠಿಸಿವೆ. ಬಿಸಿಲು ಮಳೆ ತಂಪೆರೆದರೂ ರೈತರ ತೋಟ ಅನಾಹುತಕ್ಕೆ ಕಾರಣವಾಗಿದೆ.
ನಿನ್ನೆ ಸಂಜೆಯ ಮಳೆ ಅನಾಹುತಗಳಿಗೆ ಕಾರಣವಾಗಿದೆ. ಕರ್ಚಿಕೊಪ್ಪದರ್ ನಲ್ಲಿರುವ ಚೌಡಮ್ಮ/ಈಶ್ವರಪ್ಪ ಎಂಬುವರ ತೋಟದ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಅದೃಷ್ಟವಶಾತ್ ಆರ್ ಸಿಸಿ ಮನೆ ಆಗಿದ್ದರಿಂದ ಮನೆಗೆ ಹಾನಿ ಉಂಟಾಗದಿದ್ದರೂ ಭಯವನ್ನ ಸೃಷ್ಠಿಸಿದೆ.
ಇದರ ಜೊತೆಗೆ ಕೊಟ್ಟಿಗೆಗೆ ಕಟ್ಟಿದ ತಗಡಿನ ಶೀಟುಗಳು ಹಾರಿ ಹೋಗಿದೆ. ಗ್ರಾಮದಲ್ಲಿ ಅಧಿಕ ಗಾಳಿಯಿಂದಾಗಿ ಇವರ ತೋಟಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿ ವಿಧ್ಯುತ್ ಕಂಬವೊಂದು ಉರುಳಿ ಬಿದ್ದಿದೆ. ಚೌಡಮ್ಮ/ಈಶ್ವರಪ್ಪ ನವರು ಬೆಳೆದಿದ್ದ ಬಾಳೆ, ಅಡಿಕೆ ಮರಗಳ ಧಾರಾಶಾಹಿಯಾಗಿವೆ.
Electricity pole falls across road in N. Sagadde, damages areca nuts, bananas



