SUDDILIVE || SHIVAMOGGA
ಅಬಕಾರಿ ಇಲಾಖೆಯ ಟಾಟಾ ಸುಮೋ, ಅಂಗಡಿಗಳ ತೆರವು-Excise Department's Tata Sumo, shops cleared
ಆರ್ ಟಿ ಒ ಕಚೇರಿಯ ಫುಟ್ ಪಾತ್ ಕಾರ್ಯಾಚರಣೆ ನಡೆದಿದೆ. ಇಂದು ಬೆಳಿಗ್ಗೆ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ದೇವರಾಜ್ ಅವರ ಸಹಯೋಗದೊಂದಿಗೆ ಮಹಾನಗರ ಪಾಲಿಕೆ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಲಾಗಿದೆ.
ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ) ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಪಾಲಿಕೆ ಮತ್ತು ಟ್ರಾಫಿಕ್ ಪೊಲೀಸರಿಗೆ ದೂರುಗಳು ಬಂದಿದ್ದವು. ರಸ್ತೆ ಹಾಗೂ ಪಾದಚಾರಿ ಮಾರ್ಗ (ಫುಟ್‌ಪಾತ್) ಮೇಲೆ ನಿಲ್ಲಿಸಲಾಗಿದ್ದ ಆರ್.ಟಿ.ಓ ಏಜೆಂಟ್‌ಗಳ ವಾಹನಗಳು, ಟೀ-ತಿಂಡಿ ಗಾಡಿಗಳು ಹಾಗೂ ಇತರೆ ನಿರುಪಯುಕ್ತ ವಾಹನಗಳನ್ನು ತೆರವುಗೊಳಿಸಲಾಗಿದೆ.
ನಂತರ ಆರ್.ಟಿ.ಓ ಏಜೆಂಟ್‌ಗಳ ವಾಹನಗಳು ಹಾಗೂ ಟೀ-ತಿಂಡಿ ಗಾಡಿಗಳಿಗೆ ಬದಲಿ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಅಬಕಾರಿ ಇಲಾಖೆಯ ಟಾಟಾ ಸುಮೋ ಸಹ ನಾಲ್ಕೈದು ದಿನಗಳಿಂದ ಹಾಗೆ ರಸ್ತೆಯ ಮೇಲೆ ನಿಂತಿತ್ತು. ಅದನ್ನೂ ಸಹ ತೆರವುಗೊಳಿಸಲಾಗಿದೆ.
Excise Department's Tata Sumo, shops cleared



