SUDDILIVE || SHIVAMOGGA
ಆರಂಭಗೊಂಡ ಶೋಭಾಯಾತ್ರೆ-The procession has begun
ಶಿವಮೊಗ್ಗದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗ ದಳದವತಿಯಿಂದ ರಾಮನವಮಿ ಹಾಗೂ ಹನುಮಾನ್ ಜಯಂತಿಯ ಅಂಗವಾಗಿ ಬೃಹತ್ ಶೋಭಯಾತ್ರೆ ನಡೆದಿದೆ. ಗೋಪಿವೃತ್ತದಿಂದ ಈ ಶೋಭಾಯಾತ್ರೆ ನಡೆದಿದ್ದು ಉಷಾ ನರ್ಸಿಂಗ್ ಹೋಂ ವೃತ್ತಕ್ಕೆ ಶೋಭಾಯಾತ್ರೆ ತಲುಪಲಿದೆ.
ಗೋಪಿ ವೃತ್ತದಲ್ಲಿ ಆಂಜನೇಯ ಸ್ವಾಮಿಯ ಟ್ರ್ಯಾಕ್ಟರ್ ಗೆ ಪೂಜೆ ಸಲ್ಲಿಸಲಾಗಿದೆ. ಬಿಜೆಪಿ ಜಿಲ್ಲಾ ಉಪಾಧಕ್ಷ ದೀನ್ ದಯಾಳು ಮತ್ತು ವಿಹೆಚ್ ಪಿ ಮತ್ತು ಬಜರಂಗ ದಳದ ಜಿಲ್ಲ ಅಧ್ಯಕ್ಷ ವಾಸುದೇವ್ ಪೂಜೆಯನ್ನ ನೆರವೇರಿಸಿದರು.
ಭಾತರ ಮಾತೆ, ಶಿವಾಜಿ, ಹನುಮಂತ ಹಾಗೂ ಶ್ರೀರಾಮನ ಪ್ರತಿಕೃತಿಯೊಂದಿಗೆ, ಭಜನಾಮಂಡಳಿ ಹಾಗೂ ಮಹಿಳೆಯರೊಂದಿಗೆ ಈ ಶೋಭಾಯಾತ್ರೆ ಆರಂಭಗೊಂಡಿದೆ. ಶೋಭಯಾತ್ರೆಯಲ್ಲಿ ಹನುಮಂತ ಮತ್ತು ಭೀಮನ ದಾಢ್ಯ ದೇಹವುಳ್ಳ ವೇಷಧಾರಿಗಳು ಪಾಲ್ಗೊಂಡು ಶೋಭಾಯಾತ್ರೆಯ ಮೆರಗನ್ನ ಹೆಚ್ಚಿಸಿದ್ದಾರೆ.
ಗೋಪಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ನಂಜಪ್ಪ ಆಸ್ಪತ್ರೆ ರಸ್ತೆ, ಶಿವಮೂರ್ತಿ ವೃತ್ತದ ಮೂಲಕ ಉಷಾ ನರ್ಸಿಂಗ್ ಹೋಮ್ ವೃತ್ತವನ್ನ ಈ ಶೋಭಾಯಾತ್ರೆ ತಲುಪಲಿದೆ. ಅಧಿಕ ಪೊಲೀಸ್ ಬಂದೋ ಬಸ್ತ್ ನಲ್ಲಿ ಈ ಶೋಭಾಯಾತ್ರೆ ಜರುಗಿದೆ. ಉಷಾ ನರ್ಸಿಂಗ್ ಹೋಮ್ ವೃತ್ತದ ಬಳಿ ವೇದಿಕೆ ಕಾರ್ಯಕ್ರಮ ಜರುಗಲಿದೆ.
The procession has begun


