SUDDILIVE || SHIVAMOGGA
ನಿನ್ನೆಯ ಮಳೆಗೆ ಮೊದಲ ಬಲಿ, ಸಂಸದರ ಸಾಂತ್ವಾನ, ಎಳೆನೀರು ಹೊತ್ತು ಡಿಸಿ ಕಚೇರಿಗೆ ಬಂದ ರೈತ- First victim of yesterday's rain, MP consoles, farmer comes to DC office carrying water
ಭದ್ರಾವತಿ ತಾಲೂಕು ಹೊಳೆಹೊನ್ನೂರು ಭಾಗದಲ್ಲಿ ನಿನ್ನೆ ಸುರಿದ ಮಳೆಗೆ ರೈತನೋರ್ವ ಮೃತಪಟ್ಟಿದ್ದಾರೆ. ಅದರ ಜೊತೆ ಮಲ್ಲಾಪುರ ರೈತರು ತಮ್ಮ ತೆಂಗುಬೆಳೆಯನ್ನ ಖರೀದಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ರೈತನೋರ್ವ ಬೆಳೆ ಸಮೇತ ಡಿಸಿ ಕಚೇರಿಗೆ ಬಂದು ಮಳೆಹಾನಿಯಾದರೂ ನಮ್ಮಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ ಪರಿಶೀಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನುಮಂತಪುರ, ಮಲ್ಲಾಪುರ, ಮಡ್ರಟ್ಟಿ ಮಲ್ಲಿಗೇನ ಹಳ್ಳಿಯ ಭಾಗದಲ್ಲಿ ಅಧಿಕ ಹಾನಿಯಾಗಿದ್ದವು. ನಿನ್ನೆ ರಾತ್ರಿಯಿಂದ ಇದುವರೆಗೂ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ.
ನಿನ್ನೆ ಸುರಿದ ಮಳೆಗೆ ಮಲ್ಲಾಪುರದ ಮಲ್ಲೇಶ್ವರಪ್ಪ ಎಂಬುವರ ಅಡಿಕೆ ತೋಟದಲ್ಲಿ ಅಡಿಕೆ ಮತ್ತು ತೆಂಗು ಮರಗಳು ಧಾರಶಾಹಿಯಾಗಿ ಹಾನಿಯಾಗಿದ್ದವು. ಹಾನಿಯಾದ ಬೆನ್ನಲ್ಲೇ ಮಲ್ಲೇಶ್ವರಪ್ಪ ಎಳನೀರು ಮತ್ತು ತೆಂಗಿನಕಾಯಿಯನ್ನ ಎತ್ತುಕೊಂಡು ಡಿಸಿ ಕಚೇರಿಗೆ ಬಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. Road
ತಮ್ಮ ಎಳನೀರು ಮತ್ತು ತೆಂಗಿನ ಕಾಯಿಯನ್ನ ಕಾರಿನಲ್ಲಿ ಹಾಕಿಕೊಂಡು ಡಿಸಿ ಕಚೇರಿಗೆ ಬಂದು ನಾವು ನಗರದಲ್ಲಿ ಎಳನೀರು ಕುಡಿದರೆ 60 ರೂ ಕೊಡಬೇಕಾಗುತ್ತದೆ. ನಮ್ಮಬಳಿ ಎಳನೀರು ಮತ್ತು ತೆಂಗಿನ ಕಾಯಿ ಇದೆ ತೆಗೆದುಕೊಳ್ಳಿ ಎಂದರೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ನಮ್ಮ ಗ್ರಾಮಕ್ಕೆ ನಿನ್ನೆ ರಾತ್ರಿ ಸುರಿದ ಮಳೆ ಹಾನಿ ಉಂಟು ಮಾಡಿದೆ. ಆದರೆ ಯಾವ ಅಧಿಕಾರಿಗಳು ಬಂದು ಪರಿಶೀಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಗ್ರಾಮಸ್ಥರು 7-8 ಜನ ರೈತರು ಹೀಗೆ ಎಳನೀರು ತೆಂಗಿನ ಕಾಯಿ ಮಾರಾಟ ಮಾಡುವವರ ಬಳಿ ಬಂದು ತೆಂಗಿನ ಕಾಯಿ ಖರೀದಿಸಿ ಎಂದು ಕೇಳಿಕೊಂಡಿದ್ದಾರೆ.
ನಿನ್ನೆಯ ಮಳೆಗೆ ಮೊದಲ ಬಲಿ, ಮಾನವೀಯತೆ ಮೆರೆದ ಸಂಸದರು
ನಿನ್ನೆ ಅರಹತೊಳಲು ಗ್ರಾಮದಲ್ಲಿ ಬಿದ್ದ ಮಳೆಗೆ ಮೊದಲ ಬಲಿಯಾಗಿದೆ. ಲೋಹಿತ್ ಎಂಬ 35 ವರ್ಷದ ರೈತ ನಿನ್ನೆ ಅಧಿಕ ಮಳೆಗೆ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಇಂದು ಅವರ ಮನೆಗೆ ಸಂಸದ ರಾಘವೇಂದ್ರ ಮತ್ತು ಇತರೆ ನಾಯಕರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಸಂಸದರು ತಮ್ಮಕೈಯಲ್ಲಿ ಆದ ಧನ ಸಹಾಯವನ್ನ ಮೃತ ಕುಟುಂಬಕ್ಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
First victim of yesterday's rain, MP consoles, farmer comes to DC office carrying water

