SUDDILIVE || SHIVAMOGGA
ಜಾತಿ ನಿಂದಿಸಿ ಮಹಿಳೆಗೆ ಬೆದರಿಕೆ ಹಾಕಿದ ಆರೋಪಿಗಳಿ ತೀರ್ಪು ನೀಡಿದ ನ್ಯಾಯಾಲಯ- Court sentences accused who threatened woman with casteist slur
ಜಾಗದ ವಿಚಾರದಲ್ಲಿ ಗಲಾಟೆ ಮಾಡಿ ಮಹಿಳೆಗೆ ಜಾತಿ ನಿಂದನೆ ಮಾಡಿದ ಆರೋಪಿಗಳಿಗೆ ಎರಡ ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದಿ:9/9/22 ರಂದು ಭದ್ರಾವತಿ ಕೆ.ಹೆಚ್ ನಗರದ ವಾಸಿ ಮಹಿಳೆಯೊಬ್ಬರು ತಮ್ಮ ವಾಸದ ಮನೆಯಲ್ಲಿದ್ದಾಗ ಆರೋಪಿತರಾದ 1.ಉಮೇಶ್,49ವರ್ಷ & 2.ನಂದನ್,22 ವರ್ಷರವರು ಜಾಗದ ವಿಚಾರವಾಗಿ, ಮಹಿಳೆ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ, ಕಾಲಿನಿಂದ ಹಲ್ಲೆ ಮಾಡಿದ ಬಗ್ಗೆ ಹೊಸಮನೆ ಠಾಣಾ ಗುನ್ನೆ ನಂ 113/2022 ರಲ್ಲಿ ಎಸ್ಸಿ& ಎಸ್ಟಿ ಪಿಎ ಕಾಯ್ದೆ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಐಪಿಎಸ್, ಎಎಸ್‌ಪಿ ಭದ್ರಾವತಿ ರವರು ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ , ಮಾನ್ಯ ನ್ಯಾಯಾಧೀಶರು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿ ರವರು ಆರೋಪಿತರಿಗೆ ತಲಾ 02 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ಒಟ್ಟು ರೂ. 62,000/- ದಂಡ, ಇಬ್ಬರು ನೊಂದ ಮಹಿಳೆಯರಿಗೆ ತಲಾ 25,000/- ಪರಿಹಾರ ಕೊಡಲು ಆದೇಶಿಸಿರುತ್ತಾರೆ.
Court sentences accused who threatened woman with casteist slur
