SUDDILIVE || SHIVAMOGGA
ಗ್ಯಾಸ್ ಏಜೆನ್ಸಿಯ ಸ್ಪಷ್ಟನೆ- Gas Agency Clarification
ಹೊಳೆಹೊನ್ನೂರಿನಲ್ಲಿ ಗ್ಯಾಸ್ ಅಪಪ್ರಚಾರವಾದ ಬೆನ್ನಲ್ಲೇ ತುಂಗ ಭದ್ರ ಇಂಡಿಯನ್ ಗ್ಯಾಸ್ ಏಜೆನ್ಸಿ ಸ್ಪಷ್ಟನೆ ನೀಡಿದ್ದಾರೆ.
ಹೊಳೆಹೊನ್ನೂರಿನಲ್ಲಿರುವ ತುಂಗಭದ್ರ ಇಂಡಿಯನ್ ಗ್ಯಾಸ್ ಸರ್ವಿಸಸ್ ಗ್ಯಾಸ್ ಸಿಲಿಂಡರ್ ನ್ನ ಬ್ಲಾಕ್ ನಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಅಪ್ರಚಾರವಾಗಿತ್ತು. ಈ ಅಪಪ್ರಚಾರದ ಬಗ್ಗೆ ಗ್ಯಾಸ್ ಏಜೆನ್ಸಿ ಸ್ಪಷ್ಟನೆ ನೀಡಿದೆ.
ಏಜೆನ್ಸಿಯಿಂದ ಯಾವ ಗ್ಯಾಸ್ ಸಿಲಿಂಡರ್ ಸಹ ದುರ್ಬಳಕೆಯಾಗಿಲ್ಲ. ಈಗ ಮನೆಮನೆಗೆ ಸರ್ವಿಸ್ ನೀಡುತ್ತಿದ್ದೇವೆ. ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿಲ್ಲ. ಇವತ್ತು ಒಂದು ಲಾರಿ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೋಗಿದ್ದರ ಬಗ್ಗೆಯೂ ಸಾರ್ವಜನಿಕರು ಅಪಪ್ರಚಾರ ಮಾಡಿದ್ದರು.
ಲಾರಿಯಲ್ಲಿ ಸಾಗಿಸಿದ್ದು, ಖಾಲಿ ಸಿಲಿಂಡರ್ ಗಳಾಗಿವೆ. ಏಜೆನ್ಸಿ ಸರ್ಕಾರದ ಸಲಹೆ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಬುಕ್ ಆಗಿ ಒಂದು ವಾರದಲ್ಲಿ ತುಂಬಿದ ಗ್ಯಾಸ್ ನ್ನಗ್ರಾಹಕರಿಗೆ ನೀಡುತ್ತಿದ್ದು ಸೇವೆಗೆ ಬದ್ದವಾಗಿದೆ ಎಂದು ಏಜೆನ್ಸಿ ಪತ್ರಿಕಾ ಪ್ರಕಟಣೆ ನೀಡಿದೆ.
Gas Agency Clarification
