SUDDILIVE || SHIVAMOGGA
ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಆರಂಭಗೊಂಡ ಜಾಥ-Jatha started against Sharavati Pumped Storage
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗದಂತೆ ವಿರೋಧಿಸಿ ಇಂದು ಪರಿಸರಕ್ಕಾಗಿನಾವು ಮತ್ತು ರಾಷ್ಟ್ರಭಕ್ತರ ಬಳಗದ ವತಿಯಿಂದ ಫ್ರೀಡಂಪರ್ಕ್ ನಿಂದ ಸೈಕಲ್, ಬೈಕ್ ಮತ್ತು ಕಾರಿನ ಜಾಥಕ್ಕೆ ಚಾಲನೆ ನೀಡಲಾಗಿದೆ.
ದಿಕ್ಕಾರ ದಿಕ್ಕಾರ ಸರ್ಕಾರಕ್ಕೆ ದಿಕ್ಕಾರ, ಪರಿಸರ ಹಸಿರಾಗಲಿ ಪಶ್ಚಿಮ ಘಟ್ಟ ಉಸಿರಾಲಿ, ಗಾಡ್ಗಿಲ್ ವರದಿ ಜಾರಿಗೆಬರಲಿ, ಉಳುಸಿ ಉಳಿಸಿ ಶರಾವತಿ ಉಳಿಸಿ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಎಂಬ ಘೋಷಣೆ, ಸೈಕಲ್ ಮೇಲೆ ಪ್ಲಕಾರ್ಡ್ ಇಟ್ಟುಕೊಂಡು ಜಾಥ ಆರಂಭವಾಗಿದೆ.
ಡಾ.ಶಿವರಾಮ್ ಕೃಷ್ಣನ್ ಮತ್ತು ಡಾ.ಪಿ ನಾರಾಯಣ್ ಜಾಥಾಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಫ್ರೀಡಂಪಾರ್ಕ್ ನಿಂದ ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ ಕಾಂತೇಶ್ ಮತ್ತಿತರರು ತೆರೆದವಾಹನದಲ್ಲಿ ಜಾಥದಲ್ಲಿ ಪಾಲ್ಗೊಂಡಿದ್ದರು. ಮೂರು ಜಾಥಗಳು ನಗರದ ಹಲವೆಡೆ ಸಂಚರಿಸಿ ಮಹಾವೀರ ವೃತ್ತದಲ್ಲಿ ಬಂದು ಬೃಹತ್ ಪ್ರತಿಭಟನೆ ನಡೆಸಲಿದೆ.
Jatha started against Sharavati Pumped Storage

