ಟಿಂಕು ಶರ್ಮಾ ಹತ್ಯೆಯ ಪ್ರಕರಣವನ್ನ ಉನ್ನತಮಟ್ಟದ ತನಿಖೆ ನೀಡುವಂತೆ ಹಿಂದೂ ಸಂಘಟನೆ ಆಗ್ರಹ- Hindu organization demands high-level investigation into Tinku Sharma murder case

 SUDDILIVE || SHIVAMOGGA

ಟಿಂಕು ಶರ್ಮಾ ಹತ್ಯೆಯ ಪ್ರಕರಣವನ್ನ ಉನ್ನತಮಟ್ಟದ ತನಿಖೆ ನೀಡುವಂತೆ ಹಿಂದೂ ಸಂಘಟನೆ ಆಗ್ರಹ- Hindu organization demands high-level investigation into Tinku Sharma murder case     

Hindu, organization


ಸಾಗರದಲ್ಲಿ ರೂಫ್ ಟಾಫ್ ಕೆಫೆ ಮಾಲೀಕ ಇಮ್ರಾನ್ 30 ವರ್ಷ ಇವನಿಂದ ಕೊಲೆಯಾದ ಟಿಂಕು ಶರ್ಮಾ (ಠಾಕೂರ್) ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಾಗೂ ಆರೋಪಿಗಳಿಗೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಇಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಡಿವೈಎಸ್ಪಿಗೆ ಮನವಿ ಸಲ್ಲಿಸಿತು. 

ಸಾಗರದಲ್ಲಿ ಸತತವಾಗಿ ಗೋಕಳ್ಳತನ, ಗಾಂಜಾ ಸರಬರಾಜು, ಹಲ್ಲೆ ಪ್ರಕರಣಗಳು, ಹಿಂದೂ ಯುವಕರ ಮೇಲೆ ಮುಸಲ್ಮಾನರಿಂದ ನೈತಿಕ ಪೋಲಿಸ್ ಗಿರಿ ಮುಂದುವರೆದಿದೆ. ನಿನ್ನೆ ಸಾಗರದಲ್ಲಿ ಬಿಹಾರ ಮೂಲದ ಕೆಲಸಗಾರ ಅಮಾಯಕ ಟಿಂಕು ಶರ್ಮಾ (ಠಾಕೂರ್) ಇವನ ಕೊಲೆ ಅಂತಹ ಗಂಭೀರ ಪ್ರಕರಣಗಳು ನಡೆದು ಸಾಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, 

ಇವುಗಳನ್ನ ತಡೆಯಲು ಪ್ರಯತ್ನಿಸದ ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ವಿಶ್ವಾಸ ಹಾಗೂ ಗೌರವ ಕಡಿಮೆಯಾಗುವಂತೆ ಆಗಿದೆ. ಈ ಕೊಲೆ ಕೇವಲ ಹಣಕಾಸಿಗೆ ಮಾತ್ರ ಆಗಿರುವುದಿಲ್ಲ ಎಂದು ಮೇಲ್ನೋಟಕ್ಕೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಆದ್ದರಿಂದ ಉನ್ನತ ಮಟ್ಟದ ತನಿಖೆ ಆದರೆ ಮಾತ್ರ ಸತ್ಯಾಸತ್ಯತೆ ಬಯಲಾಗುತ್ತದೆ. ಕೊಲೆಯಾದ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಬೇಕು ಹಾಗೂ ಕೊಲೆ ಆರೋಪಿಯ ಅಂಗಡಿಯನ್ನು ತೆರವುಗೊಳಿಸಬೇಕು, ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.‌

Hindu organization demands high-level investigation into Tinku Sharma murder case 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close