SUDDILIVE || SHIVAMOGGA
ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದವರ ಮೇಲೆ ಹೆಜ್ಜೇನು ದಾಳಿ-Bees attack those who came to pray at church
ನಗರದ ಬಿಹೆಚ್ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಹಜ್ಜೇನು ಕಚ್ಚಿದೆ. 50 ಕ್ಕೂ ಹೆಚ್ಚು ಜನರಿಗೆ ಹೆಜ್ಜೇನು ಕಚ್ಚಿದ್ದು ಸುಮರು 20 ಜನ ಮೆಗ್ಗಾನ್ ಗೆ ಬಂದು ದಾಖಲಾಗಿದ್ದಾರೆ.
ಇಂದು ಗುಡ್ ಫ್ರೈಡೆ ದಿನ ಭಕ್ತರು ಕ್ರೈಸ್ತನಿಗೆ ಪ್ರಾರ್ಥನೆ ಸಲ್ಲಿಸಲು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುವಾಗ ಕಟ್ಟಡದ ಒಳಗೆ ಇದ್ದ ಜೇನುಗಳು ಬುಗಿಲೆದ್ದಿವೆ. ಸುಮಾರು 50-60 ಜನರಿಗೆ ಜೇನು ಕಚ್ಚಿರ ಬಹುದು ಎಂದು ಅಂದಾಜಿಸಲಾಗಿದೆ.
ಗುಡ್ ಫ್ರೈಡೆ (ಶುಭ ಶುಕ್ರವಾರ) ಯೇಸು ಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಮರಣವನ್ನು ಸ್ಮರಿಸುವ ಕ್ರೈಸ್ತರ ಅತ್ಯಂತ ಪವಿತ್ರ, ಗಂಭೀರ ಶೋಕಾಚರಣೆಯ ದಿನವಾಗಿದೆ. ಈ ದಿನ, ಮಾನವಕುಲದ ಪಾಪಗಳಿಗಾಗಿ ಯೇಸು ಅನುಭವಿಸಿದ ತ್ಯಾಗ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. ಇದು ಈಸ್ಟರ್ ಭಾನುವಾರದ ಮುಂಚಿನ ಶುಕ್ರವಾರದಂದು ಬರುತ್ತದೆ.
ಸುಮಾರು ಇಪ್ಪತ್ತುಕ್ಕೂ ಹೆಚ್ಚು ಜನರು ಬಂದು ಶಿವಮೊಗ್ಗದ ಮೆಗ್ಗಾನ್ ನಲ್ಲಿ ದಾಖಲಾಗಿದ್ದಾರೆ. ಕೋಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಭೇಟಿ ನೀಡಿದ್ದಾರೆ.
Bees attack those who came to pray at church


