SUDDILIVE || KUNDAPURA
ತ್ರಾಸಿ ಬೀಚ್ ಬಳಿ ಭೀಕರ ಅಪಘಾತ-ಶಿವಮೊಗ್ಗದ ಬಿಆರ್ ಪಿಯ ಪ್ರವಾಸಿಗರ ಬಸ್ ಚಾಲಕ ಮತ್ತು ಕ್ಲೀನರ್ ಸಾವು-Horrific accident near Trasi Beach - Shivamogga BRP tourist bus driver and cleaner killed
ಮುರುಡೇಶ್ವರದಿಂದ ಉಡುಪಿಗೆ ತೆರಳುತ್ತಿದ್ದ ಶಿವಮೊಗ್ಗ ಜಿಲ್ಲೆಯ ಪ್ರವಾಸಿಗರ ಬಸ್ ಲಾರಿಗೆ ಗುದ್ದಿದ ಪರಿಣಾಮ ಬಸ್ ನ ಚಾಲಕ ಮತ್ತು ಕ್ಲೀನರ್ ಸಾವನ್ನಪ್ಪಿದ್ದಾರೆ. ಉಳಿದ ನಾಲ್ಕೈದು ಜನರಿಗೆ ತೀವ್ರ ಗಾಯವಾಗಿದೆ.
ಶಿವಮೊಗ್ಗದ ಬಿಆರ್ ಪಿಯ ಕುವೆಂಪು ವಿಶ್ವ ವಿದ್ಯಾಲಯದಲ್ಲಿರುವ ವಿಶ್ವ ವಿದ್ಯಾನಿಲಯ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕರವಾಳಿಗೆ ಕೊನೆಯ ವರ್ಷದ ಬಿಕಾಂ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು.
ಇಂದು ಕೊನೆಯ ದಿನ ಪ್ರವಾಸದ ಅಂಗವಾಗಿ ಮುರ್ಡೇಶ್ವರದಿಂದ ಉಡುಪಿಗೆ ತೆರಳುವಾಗ ಕುಂದಾಪುರದ ತ್ರಾಸಿ ಬೀಚ್ ಬಳಿ ಲಾರಿಯೊಂದಕ್ಕೆ ಬಸ್ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿಯಲ್ಲಿ ಬಸ್ ಚಾಲಕ ಅರ್ಷದ್ ಮತ್ತು ಕ್ಲೀನರ್ ಸಾವನ್ನಪ್ಪಿದ್ದಾರೆ. ಕ್ಲೀನರ್ ಹೆಸರು ಇನ್ನೂ ತಿಳಿದು ಬಂದಿಲ್ಲ.
ಚಾಲಕ ಮತ್ತು ಕ್ಲೀನರ್ ಸೇರಿ 47 ಜನರು ಬಸ್ ನಲ್ಲಿ ಪ್ರವಾಸಿಸುತ್ತಿದ್ದರು. ಈ ಬಗ್ಗೆ ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ವಸಂತ್ ಕುಮಾರ್ ಇಂದು ಮುರ್ಡೇಶ್ವರದಿಂದ ಉಡುಪಿಗೆ ತೆರಳುತ್ತಿದ್ದನಮ್ಮಕಾಲೇಜಿನ ಬಸ್ ಅಪಘಾತ ಸಂಭವಿಸಿದೆ. ಕೆಲ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಭೈರವ ಟ್ರಾನ್ಸ್ ಪೋರ್ಟ್ ನ ಬಸ್ ಚಾಲಕ ಮತ್ತು ಕ್ಲೀನರ್ ಸತ್ತಿದ್ದಾರೆ. ಗಾಯಾಳುಗಳಲ್ಲಿ ಐವರಿಗೆ ತೀವ್ರವಾಗಿ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಎಂದು ಮಾಹಿತಿ ನೀಡಿದರು.
Horrific accident near Trasi Beach - Shivamogga BRP tourist bus driver and cleaner killed

