ಕುವೆಂಪು ವಿಶ್ವ ವಿದ್ಯಾಲಯದಲ್ಲಿ NSUI ಪ್ರತಿಭಟನೆಯಲ್ಲಿ ಪಾಟ್ ಗಳು ಪೀಸ್ ಪೀಸ್ ಮಾಡಿರುವ ವಿರುದ್ಧ ಎಫ್ ಐಆರ್ ಮಾಡುತ್ತೇವೆ-ವಿಸಿ ಶರತ್ ಅನಂತ್ ಮೂರ್ತಿ ಎಚ್ಚರಿಕೆ-FIR will be filed against the protest by the NSUI protestors at Kuvempu University - VC Sharath Ananth Murthy warns

 SUDDILIVE || SHIVAMOGGA

ಕುವೆಂಪು ವಿಶ್ವ ವಿದ್ಯಾಲಯದಲ್ಲಿ NSUI ಪ್ರತಿಭಟನೆಯಲ್ಲಿ ಪಾಟ್ ಗಳು ಪೀಸ್ ಪೀಸ್ ಮಾಡಿರುವ ವಿರುದ್ಧ ಎಫ್ ಐಆರ್ ಮಾಡುತ್ತೇವೆ-ವಿಸಿ ಶರತ್ ಅನಂತ್ ಮೂರ್ತಿ ಎಚ್ಚರಿಕೆ-FIR will be filed against the protest by the NSUI protestors at Kuvempu University - VC Sharath Ananth Murthy warns

Fir, protest

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘಟನೆ ನಡೆಸಿದ ಪ್ರತಿಭಟನೆ ಹಿಂದೆ ಯಾರೂ ಇದ್ದಾರೆ ಎಂಬ ಶಂಕೆ ಇದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಶರತ್ ಅನಂತಮೂರ್ತಿಯವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನಾನು ಬೇರೆಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾಗ ಕುವೆಂಪು ಶತಮಾನೋತ್ಸವದ ಭವನದಲ್ಲಿ ಇರುವ ನಮ್ಮ ಕಚೇರಿಗೆ ಯಾರೋ ವಿದ್ಯಾರ್ಥಿಗಳು ಅಲ್ಲದ ಕೆಲವರು ಬಂದು ಪಾಟ್ ಗಳನ್ನ ಒಡೆದಿದ್ದಾರೆ ಎಂದು ಕರೆ ಬಂದಾಗ ನಾನು ಕಚೇರಿಗೆ ಬಂದೆ. ಆಗ ನನ್ನನ್ನ ಕೆಲವರು ಮುತ್ತಿಗೆ ಹಾಕಿದರು. ನನ್ನನ್ನ ಎಳೆದಾಡಲು ಯತ್ನಿಸಿ ನಂತರ ದಾರಿ ಬಿಟ್ಟರು ಎಂದಿದ್ದಾರೆ. 

ಕುವೆಂಪು ವಿಶ್ವ ವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಇರುವ ಕುವೆಂಪು ಅವರ ಪ್ರತಿಮೆ ಮುಂದೆ ಪಾಟ್ ಗಳನ್ನ ಕುಟ್ಟಿ ಕುಟ್ಟಿ ಪುಡಿ ಮಾಡಿದ್ದಾರೆ. ಇವರು ಯಾರೂ ನನಗೆ ಗೊತ್ತಿಲ್ಲ. ಇವರಲ್ಲಿ ಕೆಲವರು ಮೊನ್ನೆ ಬಂದು ಮನವಿಕೊಟ್ಟು ಹೋಗಿದ್ದಾರೆ. ಮನವಿಯಲ್ಲೂ ಕೆಲವನ್ನ ಪರಿಗಣಿಸಿದ್ದೇವೆ. ಅವರ ಬೇಡಿಕೆನ್ನ ಸರಿ ಪಡಿಸಲಾಗುವುದು. ಅದು ಏಕಾಏಕಿ ಮಾಡಲು ಸಾಧ್ಯವಿಲ್ಲ. ನಿಧಾನಕ್ಕೆ ಪರಿಹರಿಸಲಾಗುವುದು ಎಂದರು. 

ನ್ಯಾಕ್ ರ‌್ಯಾಂಕಿನಲ್ಲಿ ರಾಜ್ಯದಲ್ಲಿಯೇ ಕುವೆಂಪುವಿವಿಗೆ ಎರಡನೇ ಸ್ಥಾನ ದೊರೆತಿದೆ. ಇಂತಹ ಸಂದರ್ಭದಲ್ಲಿ ಕೆಲವರ ಈ ರೀತಿಯ ಪ್ರತಿಭಟನೆ ವಿವಿಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ. ಇದನ್ನ ಅತ್ಯಂತವಾಗಿ ಖಂಡಿಸುತ್ತೇವೆ. ವಿಶ್ವ ವಿಸ್ಯಾಲಯದಲ್ಲಿ ವೈಲೆನ್ಸ್ ಮಾಡುವುದು ಸರಿಯಲ್ಲ ಹಾಗಾಗಿ ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು. 

FIR will be filed against the protest by the NSUI protestors at Kuvempu University - VC Sharath Ananth Murthy warns

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close