SHIVAMOGGA || SHIVAMOGGA
ಮೆಸ್ಕಾಂ ಅಧಿಕಾರಿಗಳ ವಿರುದ್ಧ ಶಾಸಕ ಚೆನ್ನಿ ಗರಂ-MLA Chenni Garam against MESCOM officials
ಸಾರ್ವಜನಿಕರು, ಸಂಘಟನೆಗಳ ಎದುರೆ ಶಾಸಕ ಚೆನ್ನಬಸಪ್ಪ ಮೆಸ್ಕಾಂ ಅಧಿಕಾರಿಗಳಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ವಿದ್ಯುತ್ ಕಂಬ ವಿಲೆ ಆದ ಬಗ್ಗೆ ಮಾಹಿತಿ ಕೊಡದೆ ಇರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನ ತರಾಟೆಗೆ ತೆಗೆಅಮದು ಕೊಂಡರು.
ಇಂದು ನಗರದ ನೆಹರೂ ರಸ್ತೆಯಲ್ಲಿರುವ ಶಾಸಕರ ಭವನದಲ್ಲಿ ವಸಂತ್ ಕುಮಾರ್ ನೇತೃತ್ವತದ ನಾಗರೀಕರ ರಕ್ಷಣ ವೇದಿಕೆ, ಸಾರ್ವಜನಿಕರು ಮತ್ತು ಪತ್ರಕರ್ತರ ಸಮ್ಮುಖದಲ್ಲಿ ಸಭೆ ನಡೆದಿದೆ. ಸಭೆಗೆ ಅನೇಕ ಅಧಿಕಾರಿಗಳು ಬರಬೇಕಿತ್ತು. ಅಧಿಕಾರಿಗಳು ಬಾರದಿದ್ದ ಹಿನ್ನಲೆಯಲ್ಲಿ ಹಾಗೂ ನೆಸ್ಕಾಂ ಅಧಿಕಾರಿಗಳು ಹಾಜರಾಗಿದ್ದರೂ ಸಹ ಮಾಹಿತಿ ಇಲ್ಲದ ಕಾರಣ ಏ.17 ಕ್ಕೆ ಸಭೆಯನ್ನ ಮುಂದೂಡಲಾಯಿತು.
ಈ ವೇಳೆ ಮೆಸ್ಕಾಂ ಅಧಿಕಾರಿಗಳಿನ್ನ ಶಾಸಕರು ತರಾಟೆಗೆ ತೆಗೆದುಕೊಂಡರು. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ವಿದ್ಯುತ್ ಕಂಬ ವಿಲೆ ಮಾಡಿರುವ ಬಗ್ಗೆ ನಾಗರೀಕ ಹಿತರಕ್ಷಣ ವೇದಿಕೆ ತೆಗೆದಿರುವ ಕಂಬದ ಬಗ್ಗೆ ಮಾಹಿತಿ ಕೇಳಿತ್ತು. ವೇದಿಕೆಯ ಪ್ರತಿಭಟನೆ ಮತ್ತು ಹೋರಾಟದಿಂದಲೇ ವಿಲೆ ಮಾಡಲಾಗಿತ್ತು.
ಆದರೆ ಮಾಹಿತಿ ನೀಡದ ಹಿನ್ನಲೆಯಲ್ಲಿ ಶಾಸಕರು ಕೆಂಡಮಂಡಲರಾಗಿದ್ದಾರೆ. ಕಂಬ ತೆಗೆದಿರುವ ಬಗ್ಗೆ ಮಾಹಿತಿ ನೀಡದೆ ಇರಲು ಕಾರಣವೇನು? ಮಾಹಿತಿಯೊಂದಿಗೆ ಬರಬೇಕಿತ್ತು ಎಂದು ಕೆಂಡಮಂಡಲವಾಗಿದ್ದಾರೆ.
MLA Chenni Garam against MESCOM officials
