ಹಂಸಿಣಿ ಬದುಕುಳಿಯುವುದು ಅನುಮಾನವೇ? Is it doubtful that Hamsini will survive?

 SUDDILIVE|| SHIVAMOGGA

ಹಂಸಿಣಿ ಬದುಕುಳಿಯುವುದು ಅನುಮಾನವೇ? Is it doubtful that Hamsini will survive?

Hamsini, doubtful

ಲಯನ್ ಸಫಾರಿಯಲ್ಲಿ ಸೋಂಕಿನಿಂದ ಗರ್ಭಕೋಶದಲ್ಲಿಯೆ ನೀರುಕುದುರೆಯ ಮರಿ ಸಾವುಕಂಡಿದ್ದು, ಅದರ ಬೆನ್ನಲ್ಲೇ ತಾಯಿ ಹಂಸಿಣಿ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದೆ. ನಿಶಕ್ತಿಗೊಳಗಾಗಿರುವುದರಿಂದ ಹಂಸಿಣಿಯು ಸಹ ಬದುಕುಳಿಯುವ ಬಗ್ಗೆ ಅನುಮಾನ ಹುಟ್ಟಿಸಿದೆ. 

ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ "ಹಂಸಿಣಿ" ಎಂಬ ಹೆಸರಿನ ಹೆಣ್ಣು ಹಿಪ್ಪೋಪೋಟಾಮಸ್‌ ಮಾ.20 ರಂದು ವೈದ್ಯ ಡಾ.ಸಮೀಕ್ಷ ರೆಡ್ಡಿಯ ಸಾವಿಗೆ ಕಾರಣವಾಗಿತ್ತು. ಇದಾದ ಬಳಿಕ ಕಳೆದ ವಾರ ಸೋಂಕಿನ ಕಾರಣ ಗರ್ಭಕೋಶದಲ್ಲಿಯೇ ಅದರ ಮರಿ ಸಾವು ಕಂಡಿದೆ. ಈಗ ಹಂಸಿಣಿಯ ಆರೋಗ್ಯವೇ ಸಂಕಷ್ಟಕ್ಕೀಡಾಗಿದೆ. ಸಫಾರಿಯ ಅಧಿಕಾರಿಗಳು ಹಂಸಿಣಿಯ ಹೆಲ್ತ್ ಬುಲಿಟಿನ್ ನೀಡುತ್ತಿರುವುದು ನೋಡಿದರೆ ಬಹುತೇಕ ಉಳಿಯುವುದು ಕಷ್ಟ ಎಂಬ ಶಂಕೆಯೂ ಕಂಡು ಬರುತ್ತಿದೆ. 

ಶಿವಮೊಗ್ಗ ಮೃಗಾಲಯ, ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿರುವ 12 ವರ್ಷದ "ಹಂಸಿಣಿ" ಎಂಬ ಹೆಸರಿನ ಹೆಣ್ಣು ಹಿಪ್ಪೋಪೋಟಾಮಸ್‌ನ ಆರೋಗ್ಯವು ಕೆಲವು ದಿನಗಳಿಂದ ಏರುಪೇರು ಆಗಿದ್ದು, ಪ್ರಸ್ತುತ ಸದರಿ ಹಿಪ್ಪೋಪೋಟಾಮಸ್‌ನ ಆರೋಗ್ಯದಲ್ಲಿ ತೀವ್ರತರವಾದ ಸಮಸ್ಯೆ ಕಂಡು ಬಂದಿದೆ ಎಂದು ಸಫಾರಿಯ ಇಡಿ ಅಮರಾಕ್ಷರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

ಹಿಪ್ಪೋಪೋಟಾಮಸ್‌ಗೆ ದಿನಾಂಕ:10.04.2026ರಂದು ಪಶು ವೈದ್ಯರ ತಂಡ ಅರವಳಿಕೆ ಮದ್ದು ನೀಡಿ ಆರೋಗ್ಯ ತಪಾಸಣೆ ನಡೆಸಿ, ರಕ್ತ ಮತ್ತು ಇತರೆ ದ್ರವಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿರುತ್ತದೆ. ಅದರ ಆಧಾರದ ಮೇಲೆ ಸದರಿ ಹೆಣ್ಣು ಹಿಪ್ಪೋಪೋಟಾಮಸ್‌ನ ಗರ್ಭಕೋಶದಲ್ಲಿ ತೀವ್ರ ಸೋಂಕಿನಿಂದ ಇತರೆ ದೇಹದ ಅಂಗಗಳು ತೀವ್ರತರವಾಗಿ ಹಾನಿ ಉಂಟಾಗಿರುತ್ತದೆ. 

 ಗರ್ಭಕೋಶದ ಸೋಂಕಿಗೆ  ಹೆಣ್ಣು ಹಿಪ್ಪೋಪೋಟಾಮಸ್‌ನ ಮರಿಯು ಗರ್ಭದಲ್ಲಿಯೇ ಮೃತಪಟ್ಟಿರಬಹುದಾಗಿದೆ ಎಂದು ವೈದ್ಯರ ತಂಡ ಸಂಶಯ ಪಡುತ್ತಿದೆ. ಹಿಪ್ಪೋಪೋಟಾಮಸ್‌ನ ಗರ್ಭಕೋಶದ ತೀವ್ರ ಸೋಂಕಿಗೆ ಕಾರಣವಾಗಿರಬಹುದು ಎಂದು ತಿಳಿಸಿರುತ್ತಾರೆ ಹಾಗೂ ಬಹುಅಂಗಾಂಗಗಳ ಸೋಂಕಿನಿಂದ ಮತ್ತು ನಿಶ್ಯಕ್ತಿಯಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಶುವೈದ್ಯರ ತಂಡ ವರದಿ ಮಾಡಿರುತ್ತಾರೆ.

Is it doubtful that Hamsini will survive?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close