ಮಂಜುನಾಥ್ ಮನೆಗೆ ಶಾಸಕ ಚೆನ್ನಿ ಭೇಟಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಶಾಸಕ- MLA Chenni visits Manjunath's house, reassures him, saying, "We are with you"

 SUDDILIVE ||| SHIVAMOGGA

ಮಂಜುನಾಥ್ ಮನೆಗೆ ಶಾಸಕ ಚೆನ್ನಿ ಭೇಟಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಶಾಸಕ- MLA Chenni visits Manjunath's house, reassures him, saying, "We are with you"    

Mla, channi

ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ನಡೆದು ದೇಶ 26 ಜನರು ಹತ್ಯೆಯಾಗಿ  ಇಂದಿಗೆ ಒಂದು ವರ್ಷ ಕಳೆದಿದೆ. ಹತ್ಯೆಯಲ್ಲಿ ಶಿವಮೊಗ್ಗದ ಮಂಜುನಾಥ್ ಸಹ ಬಲಿಯಾಗಿದ್ದು ಅವರ ಮನೆಗೆ ಇಂದು ಶಾಸಕ ಚನ್ನಬಸಪ್ಪ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮೃತ ಮಂಜುನಾಥ್ ಅವರ ಭಾವಚಿತ್ರಕ್ಕೆ ಶಾಸಕರು ಹೂವಿನ ಹಾರ ಹಾಕಿದರು. ಇದೆ ವೇಳೆ ಮಂಜುನಾಥ್ ಅವರ ತಾಯಿ ಸುಮತಿ ಅವರ ಕಾಲಿಗೆ ನಮಸ್ಕರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಸುಮತಿ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಉಚಿತ ಆರೋಗ್ಯ ಚಿಕಿತ್ಸೆ ಗೆ ಕುಟುಂಬ ಬೇಡಿಕೆ ಇಟ್ಟಿದೆ.


ಅದೇ ವೇಳೆ ಮಂಜುನಾಥವರ ಪತ್ನಿ ಪಲ್ಲವಿ ಅವರು ಹೊರಗುತ್ತಿಗೆ ಆಧಾರದಲ್ಲಿ ಹಾಪ್ಕಾಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಭದ್ರತೆಗೆ ಕುಟುಂಬ ಮತ್ತೊಂದು ಬೇಡಿಕೆ ಇಟ್ಟಿದೆ. ಇದರ ಜೊತೆಗೆ ಅವರ ಉಬಯಕುಶಲೋಪರಿ ಕೇಳಿ ನಂತರ ಶಾಸಕರು ಮಾಧ್ಯಮಗಳಿಗೆ ಮಾತನಾಡಿ ಭಯೋತ್ಪಾದಕರ ದಾಳಿಗೆ ಬಲಿಯಾಗಿ ಮಂಜುನಾಥ್ ಒಂದು ವರ್ಷವಾಗಿದೆ. ಕುಟುಂಬ ಮಾತನಾಡಿಸಲು ಬಂದಿದ್ದೇವೆ. ಮಂಜುನಾಥ ಅವರ ಬಲಿದಾನಕ್ಕೆ ದೇಶ ತಕ್ಕ ಉತ್ತರ ನೀಡಿದ್ದಾರೆ.

ಸಿಂಧೂರದ ಮೂಲಕ ದೇಶ ಉತ್ತರ ನೀಡಲಾಗಿದೆ.  ಹೆಣ್ಮಕ್ಕಳ ಸಿಂದೂರ ಅಳಿಸಿದ್ದ ಹಿನ್ನಲೆಯಲ್ಲಿ ದೇಶ ತಕ್ಕ ಉತ್ತರ ನೀಡಿದೆ. ಒಂದಿಷ್ಟು ಸಂಗತಿಯನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಗಿಸಿದೆ. ಒಂದಿಷ್ಟು ಕಾರ್ಯ ನಡೆಯಬೇಕಿದೆ. 26 ಜನರ ಬಲಿದಾನದಲ್ಲಿ ರಾಜ್ಯದಿಂದ ಮೂವರು ಬಲಿದಾನ ಆಗಿರುವುದು ನಮ್ಮ ರಾಜ್ಯದವರಾಗಿದ್ದಾರೆ. ಮಂಜುನಾಥ ಅವರ ತಾಯಿಗೆ ಆರೋಗ್ಯದ ಬಗ್ಗೆ ಸಹಾಯಬೇಕಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. 

MLA Chenni visits Manjunath's house, reassures him, saying, "We are with you"    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close