SUDDILIVE || SHIVAMOGGA
ಭಯೋತ್ಪಾದಕರನ್ನ ಬೆಂಬಲಿಸಿದ ಕಾಂಗ್ರೆಸ್ ನ್ನ ಈ ದೇಶದ ಜನ ಕ್ಷಮಿಸೊಲ್ಲ-ಶಾಸಕ ಚೆನ್ನಿ- The people of this country will not forgive Congress for supporting terrorists - MLA Chenni
ಪ್ರಧಾನಿ ಮೋದಿ ಯವರನ್ನ ಭಯೋತ್ಪಾದಕ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರಘೆ ವಿರುದ್ಧ ಇಂದು ನಗರ ಬಿಜೆಪಿ ಗೋಪಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ಖರ್ಗೆ ಪ್ರತಿಕೃತಿಯನ್ನ ದಹಿಸಲಾಯಿತು
ನಂತ ಮಾತನಾಡಿದ ಶಾಸಕ ಚೆನ್ನಬಸಪ್ಪ, ಪ್ರಧಾನಿ ಮೋದಿಯನ್ನ ಖರ್ಗೆ ಭಯೋತ್ಪಾದಕ ಎಂದು ಹೇಳಿದ್ದಾರೆ. ಅಂದರೆ ಇಡೀ ಕಾಂಗ್ರೆಸ್ ಪಕ್ಷ ಹೇಳಿದಂತಾಹ ಇದು ದೇಶಕ್ಕೆ ಮಾಡಿದ ಅಪಮಾನವಾಗಿದೆ ಎಂದರು.
ಕಾಂಗ್ರೆಸ್ ಭಯೋತ್ಪಾದಕತೆಯನ್ನ ಮೆಟ್ಟಿ ನಿಲ್ಲಬೇಕಿತ್ತು. ಅದನ್ನಮಾಡಲಿಲ್ಲ. ಇಂದಿರಾಗಾಂಧಿ ಹತ್ಯೆ ಮಾಡಿದ್ದು ಬಿಂದ್ರನ್ ವಾಲಾ. ಇವರಿಗೆ ಕುಮ್ಮಕ್ಕು ಕೊಟ್ಟಿದ್ದು ಕಾಂಗ್ರೆಸ್, ಯಾರನ್ನ ಸಾಕ್ತಾಯಿತ್ತೋ ಆತನ ಗುಂಡಿಗೆ ಇಂದಿರಾಗಾಂಧಿ ಹತ್ಯೆಯಾಗಿದ್ದರು. ಕಾಂಗ್ರೆಸ್ ಈ ದೇಶಕ್ಕೆ ಅಪಮಾನ ಮಾಡಿದೆ. ಕುರಾನ್ ನಲ್ಲಿ ಆರ್ ಎಸ್ ಎಸ್ ಗೆ ಮಟ್ಟಹಾಕಿ ಎನ್ನಲಿಲ್ಲ. ಆರ್ ಎಸ್ ಎಸ್ ಗೆ ಮತ್ತು ಕಾರ್ಯಕರ್ತರಿಗೆ ಕೊಲೆ ಮಾಡಿ ಎಂದು ಖರ್ಗೆ ಹೇಳಿದ್ದಾರೆ ಎಂದರು.
ಪ್ರಧಾನಿ ಈ ದೇಶದ ಸೇವಕ, ರಕ್ಷಕನಾಗಿ ಕೆಲಸ ಮಾಡಿದ್ದಾರೆ. ಜನ ಅವರನ್ನ ಮೆಚ್ಚಿದ್ದಾರೆ. ಇಂತಹವರ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಕುಲಕ್ಕರ್ ಬಾಂಬ್ ಬ್ಲಾಸ್ಟ್ ನಲ್ಲಿ ಆರೋಪಿಗೆ 6 ವರ್ಷ ಜೈಲು ಶಿಕ್ಷೆಯಾಗಿದೆ. ಬಾಂಬ್ ಬ್ಲಾಸ್ಟ್ ಮಾಡಿದವರನ್ನ ಬ್ರದರ್ಸ್ ಎಂದಿದ್ದು ಕಾಂಗ್ರೆಸ್. ಆರೋಪಿನೆ ಒಪ್ಪಿ ಬ್ಲಾಸ್ಟ್ ಮಾಡಿದ್ದೇನೆ ಎಂದು ಕೋರ್ಟ್ ನಲ್ಲಿ ತಪ್ಪೊಪ್ಪಿದ್ದಾನೆ. ಅಪ್ಪ ಮತ್ತು ಮಗನಾದ ಖರ್ಗೆಯಿಂದ ಕಾಂಗ್ರೆಸ್ ಗೆ ಕೊನೆ ಮೊಳೆಹೊಡೆಯಲಿದ್ದಾರೆ ಎಂದರು.
ಈ ದೇಶದಲ್ಲಿ ಭಯೋತ್ಪಾದಕರನ್ನ ಬೆಂಬಲಿಸಿ ಪೋಷಿಸಿದವರು ಕಾಂಗ್ರೆಸ್, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಜವಬ್ದಾರಿಯಿಂದ ಮಾತನಾಡಬೇಕು. ಈ ದೇಶ ಕ್ಷಮಿಸೊಲ್ಲ. ಭಯೋತ್ಪಾದಕತೆ ಮಾಡಿದ ಮುಸ್ಲೀಂರನ್ನ ಕಾಂಗ್ರೆಸ್ ಕ್ಷಮಿಸಬಹುದು. ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನ ಕಾಂಗ್ರೆಸ್ ಕ್ಷಮಿಸಬಹುದು ಆದರೆ ದೇಶದ ಜನ ಕ್ಷಮಿಸೊಲ್ಲ ಎಂದರು.
ಕಳೆದ ವರ್ಷ ಪೆಹಲ್ಗಾಮ್ ನಲ್ಲಿ ನರಮೇದವಾದಾಗ ಪ್ರಧಾನಿ ಮೋದಿ ಸಿಂದೂರ ಮೂಲಕ ಹೆಕ್ಕಿ ಹೆಕ್ಕಿ ಭಯೋತ್ಪಾದಕರಿಗೆ ಉತ್ತರ ನೀಡಿದ್ದಾರೆ. ಸರ್ವನಾಶಕ್ಕೆ ಎದೆ ಸೆಟೆದು ನಿಂತವರನ್ನ ದಹಿಸಲಾಯಿತು. ಅಂತಹ ಮೋದಿಯವರನ್ನ ಖರ್ಗೆಯವರು ಭಯೊತ್ಪಾದಕ ಎಂದು ಕ್ಷಮೆ ಕೇಳಿದ್ದಾರೆ. ಎಷ್ಟು ಬಾರಿ ಕ್ಷಮೆ ಕೇಳುತ್ತೀರಿ ನಿಮ್ಮಕುಟುಂಬವನ್ನ ಸರ್ವ ನಾಶ ಮಾಡಿದ್ದವರನ್ನ ಸದೆ ಬಡೆದಿದ್ದು ಪ್ರಧಾನಿಯವರು ಎಂದರು.
ಕಾಂಗ್ರೆಸ್ ದೇಶ ಭಕ್ತರನ್ನ ಅಪಮಾನಿಸಿದೆ. ತಾಯಿಂದಿರಿಗೆ ಅಪಮಾನ ಮಾಡಿದೆ. ಅದಕ್ಕೆ ದೇಶದ ಯುವಜನ ಸುಮ್ಮನೆ ಬಿಡಲ್ಲ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
The people of this country will not forgive Congress for supporting terrorists - MLA Chenni
