SUDDILIVE || SHIVAMOGGA
ತಲೆಮರೆಸಿಕೊಂಡಿದ್ದ ನೇಪಾಳಿ ಮಂಜ ಅರೆಸ್ಟ್- Nepali Manja arrested
ಹಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಜುನಾಥ ಅಲಿಯಾಸ್ ನೇಪಾಳಿ ಮಂಜ (41) ವಾರೆಂಟ್ ಆರೋಪದ ಮೇಲೆ ದೊಡ್ಡಪೇಟೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗಗದ ಮಂಜುಶ್ರೀ ನ್ಯಾಯಬೆಲೆ ಅಂಗಡಿ ಸಮೀಪದ ನಿವಾಸಿಯಾದ ಈತ, ಬೆಂಗಳೂರಿನ ಕ್ಲೌಡ್-9 ಆಸ್ಪತ್ರೆಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈತನ ವಿರುದ್ಧ ದೊಡ್ಡಪೇಟೆ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ ಸಂಚು ಸೇರಿದಂತೆ ಸುಮಾರು ಆರು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ.
ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ, ಪಿಎಸ್ಐ ಎಮ್.ಎನ್. ಅಂಬಿಗೇರ್ ನೇತೃತ್ವದ ವಾರೆಂಟ್ ಸಿಬ್ಬಂದಿಗಳಾದ ಗೋವರ್ಧನ್ ಮತ್ತು ರವೀಂದ್ರ ಪ್ರಸಾದ್ ಅವರು ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಪ್ರಕರಣಗಳು
ಅನಿಲ್ ಎಸ್ ಆರ್ ಎಂಬುವರನ್ನ ಗೋಪಿ ವೃತ್ತದ ಬಳಿ ಥಳಿಸಿದ ಪ್ರಕರಣ, ಫ್ರೀಡಂ ಪಾರ್ಕ್ ನಲ್ಲಿ ಶಶಿಕುಮಾರ್ ಗೆ ಒಲಂಗ, ನೇಪಾಳಿ ಮಂಜ, ಸಂದೀಪ, ಕರಿಯ ವಿನಿ ಜೊತೆ ಸೇರಿ ಕೊಲೆಯತ್ನದ ಪ್ರಕರಣವೂ ಸೇರಿದಂತೆ ಒಟ್ಟು ಪ್ರಮುಖ 6 ಪ್ರಕರಣಗಳಲ್ಲಿ ಆರೋಪಿಯಾಗಿದ್ದನು.
Nepali Manja arrested
