ಬಾಳೆಬರೆ ಘಾಟ್ : ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕ- Balebare Ghat: Transport connectivity through passenger interchange system

SUDDILIVE || SHIVAMOGGA

ಬಾಳೆಬರೆ ಘಾಟ್ : ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕ- Balebare Ghat: Transport connectivity through passenger interchange system

Balebare, Ghat

ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ (ಅದಲು-ಬದಲು) ಮೂಲಕ ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ತಾತ್ಕಾಲಿಕ ಅನುಮತಿ ನೀಡಿ ಆದೇಶಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದ್ದಾರೆ.

ಸಂಚಾರ ನಿಯಮಗಳು ಮತ್ತು ಷರತ್ತುಗಳು :

• ಈ ವ್ಯವಸ್ಥೆಯು ಕೇವಲ ಸಾರ್ವಜನಿಕ ಸಂಪರ್ಕ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇವಲ 35 ಆಸನವುಳ್ಳ (432 ಸೆಂ.ಮೀ ಚಕ್ರತಳ ಮೀರದ) ಬಸ್ಸುಗಳಿಗೆ ಮಾತ್ರ ತಿರುಗಲು ಅವಕಾಶವಿರುತ್ತದೆ. 

• ವಾಹನ ಬದಲಾವಣೆ ಮಾಡಲು ಪ್ರಯಾಣಿಕರು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕಾಗುತ್ತದೆ. ಈ ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢರಾಗಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು. 

• ಭೂಕುಸಿತ ಸಂಭವಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಹತ್ತಿರವಿರುವುದರಿಂದ ಮೆಟ್ಟಿಲುಗಳಿಗೆ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಮತ್ತು ದುರಸ್ತಿ ಮಾಡಲು ಸೂಚಿಸಲಾಗಿದೆ. 

• ಸ್ಥಳದಲ್ಲಿ ತುರ್ತು ಉಪಚಾರಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ. 

ಮಾರ್ಗ ಬದಲಾವಣೆ ವಿವರ

ಶಿವಮೊಗ್ಗ-ಹೊಸನಗರ-ನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ವಾಹನಗಳು ಚಂಡಿಕಾ ದೇವಸ್ಥಾನದವರೆಗೆ ಸಂಚರಿಸಬಹುದಾಗಿದ್ದು, ಅಲ್ಲಿ ಸೂಕ್ಷö್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ. 

ಚಂಡಿಕ ದೇವಸ್ಥಾನದ ಒಂದನೇ ತಿರುವಿನಲ್ಲಿ ಭೂ ಕುಸಿತವಾದ ಜಾಗದ ಕೆಳಗಿನ ಮೊದಲನೇ ತಿರುವಿನಲ್ಲಿ ಹಾಲಿ ಇರುವ ಕಾಂಕ್ರಿಟ್ ರಸ್ತೆಯ ಕ್ಯಾರೇಜ್-ವೇ-24 ಅಡಿ ಇದ್ದು ಅದಕ್ಕೆ ಹೊಂದಿಕೊಂಡಿರುವ ರಸ್ತೆಯ ಗ್ರಾವೆಲ್ ಶೋಲ್ಡರ್‌ನ್ನು ಸ್ಥಳೀಯ ಸಾರ್ವಜನಿಕರೇ ಕಾಂಕ್ರಿಟ್ ರಸ್ತೆಗೆ ಸಮನಾಗಿ 18 ಅಡಿ ಅಗಲಕ್ಕೆ ಅಗಲೀಕರಣ ಮಾಡಿ ಎತ್ತರಿಸಿ ಮಟ್ಟ ಮಾಡಿರುವುದು ಕಂಡುಬಂದಿದ್ದು, ವಾಹನಗಳನ್ನು ಸೂಕ್ಷö್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.

ಪ್ರಯಾಣಿಕರು ವಾಹನ ಬದಲಾವಣೆ ಮಾಡಲು ಕಾಲ್ನಡಿಗೆಯಲ್ಲಿ ಓಡಾಡಲು ಪ್ರಸ್ತಾಪಿಸಿರುವ ಮಟ್ಟಿಲುಗಳು ಕಿರಿದಾಗಿದ್ದು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಗೊಂದಲವಿಲ್ಲದೇ ದೈಹಿಕವಾಗಿ ಸದೃಢವಾಗಿರುವ ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಬಹುದಾಗಿರುತ್ತದೆ. ಈ ಆದೇಶವು ಏಪ್ರಿಲ್ 14 ರಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Balebare Ghat: Transport connectivity through passenger interchange system

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close