SUDDILIVE || SHIVAMOGGA
ಸೇತುವೆಯಿಂದ ಹಾರಿ ನರ್ಸ್ ಆತ್ಮಹತ್ಯೆ-Nurse commits suicide by jumping off bridge
ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಸೇತುವೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತಹ ಘಟನೆ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲೂಕಿನ ಮುಡುಬು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.
ರನ್ಯಾ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಶುಶ್ರೂಷಕಿಯರ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಮುತ್ತಿನಕೊಪ್ಪದಿಂದ ಮುಡುಬಕ್ಕೆ ಸ್ಕೂಟರ್‌ನಲ್ಲಿ ಬಂದು ಅಲ್ಲಿ ನಿಲ್ಲಿಸಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಹೋಗಿ ಸಂಜೆ ಬರುತ್ತಿದ್ದರು. ಸೋಮವಾರವೂ ಸಂಜೆ ಮನೆಗೆ ಬಂದಿದ್ದು, ಸ್ವಲ್ಪ ಹೊತ್ತಿನಲ್ಲೇ ಮತ್ತೆ ಸ್ಕೂಟರ್‌ನಲ್ಲಿ ಹೊರಟು ಸೇತುವೆಯಿಂದ ಕೆಳಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದವರು ಮೃತದೇಹದ ಶೋಧ ಕಾರ್ಯ ನಡೆಸಿದ್ದು, ರಾತ್ರಿ ಮೃತದೇಹ ಪತ್ತೆಯಾಗಿದೆ.
‘ರನ್ಯಾ ಅವರನ್ನು ಎಂ.ಬಿ.ಎಲ್ದೊ ಅವರಿಗೆ 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಇಬ್ಬರು ಮಕ್ಕಳಿದ್ದಾರೆ. ದಂಪತಿ ಈಚೆಗೆ ಸಣ್ಣಪುಟ್ಟ ವಿಚಾರಗಳಿಗೂ ಜಗಳ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಮಗಳು ನನಗೆ ಕರೆ ಮಾಡಿ ತಿಳಿಸುತ್ತಿದ್ದಳು. ಇದರಿಂದ ಖಿನ್ನತೆ ಅಥವಾ ಇನ್ಯಾವುದೋ ವಿಚಾರಕ್ಕೊ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ರನ್ಯಾ ತಂದೆ ಸಿ. ರಾಜು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Nurse commits suicide by jumping off bridge

