SUDDILIVE || SHIVAMOGGA
ಎರಡು ಬೈಕ್ ವೀಲಿಂಗ್ ವಿರುದ್ಧ ಪ್ರಕರಣ ದಾಖಲು-Case registered against two bike wheelers
ವೀಲಿಂಗ್ ವಿಚಾರದಲ್ಲಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಒಂದು ನಗರದ ರಿಂಗ್ ರೋಡ್ ನಲ್ಲಿ ವೀಲಿಂಗ್ ಮಾಡಿದ್ದು ಮತ್ತು ನಂದಿನಿ ಲೇಔಟ್ ನಲ್ಲಿ ಇರುವ ರಸ್ತೆಯಲ್ಲಿ ವೀಲಿಂಗ್ ಮಾಡಿದ್ದು ಇವೆರಡನ್ನು ಆರೋಪಿಗಳು ಇನ್ಸ್ಟಾಗ್ರಾಮ್ ಐಡಿಯಲ್ಲಿ ಹಾಕಿಕೊಂಡಿದ್ದರಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ನಗರದ ರಿಂಗ್ ರಸ್ತೆಯಲ್ಲಿ ಕೆ ಎ 14 ಈ ಆರ್ 91 36 ಕ್ರಮ ಸಂಖ್ಯೆಯ ಬೈಕ್ ನಲ್ಲಿ ಹೊನ್ನಾಳಿ ರಸ್ತೆಯಲ್ಲಿರುವ ಶಾದ್ ನಗರದ ನಿವಾಸಿ ಮೊಹಮದ್ ಶಾಹಿದ್ ಎಂಬಾತ ವಿಡಿಯೋ ಮಾಡಿ ಇನ್ ಸ್ಟಾದಲ್ಲಿ ಹರಿಬಿಟ್ಟಿದ್ದನು. ಈ ಕುರಿತು ಟ್ರಾಫಿಕ್ ಪೊಲೀಸ್ ವೃತ್ತ ನಿರೀಕ್ಷಕರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಲ್ಕೊಳ ನಂದಿನಿ ಬಡಾವಣೆ ರಸ್ತೆಯಲ್ಲಿ ಸತೀಶ್ ಎಂಬಾತ ಕೆಎ 14 ಇಡಬ್ಲ್ಯೂ2638 ಕ್ರಮಸಂಖ್ಯೆಯ ಬೈಕ್ ನಲ್ಲಿ ವೀಲಿಂಗ್ ಮಾಡಿ ಇನ್ ಸ್ಟಾ ಗ್ರಾಮ್ ನಲ್ಲಿ ಹರಿಬಿಟ್ಟಿದ್ದು ಆತನ ವಿರುದ್ಧವೂ ದೂರು ದಾಖಲಾಗಿದೆ.
Case registered against two bike wheeler
