ಭದ್ರಾವತಿ-ಸ್ಪಾ ಮೇಲೆ ಪೊಲೀಸರ ದಾಳಿ, ಯುವತಿಯರ ರಕ್ಷಣೆ-Police raid Bhadravati-Spa, young women rescued

 SUDDILIVE || BHADRAVATHI

ಭದ್ರಾವತಿ-ಸ್ಪಾ ಮೇಲೆ ಪೊಲೀಸರ ದಾಳಿ, ಯುವತಿಯರ ರಕ್ಷಣೆ-Police raid Bhadravati-Spa, young women rescued     


Spa, raid
ಸಾಂಧರ್ಭಭಿಕ ಚಿತ್ರ

ಭದ್ರಾವತಿಯ ಸಿದ್ದರೂಢ ನಗರದಲ್ಲಿರುವ ಸ್ಪಾ ವೊಂದರ ಮೇಲೆ ಸಿಪಿಐ ನಾಗಮ್ಮ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಯುವತಿಯರನ್ನ ರಕ್ಷಿಸಲಾಗಿದ್ದು, ಸ್ಪಾ ನಡೆಸುತ್ತಿದ್ದ ಮಾಲೀಕ ಮತ್ತು ಕಟ್ಟಡದ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಿದ್ದರೂಢ ನಗರದಲ್ಲಿ ವೆಲ್ನಸ್ ಸ್ಪಾದಲ್ಲಿ ಹೊರಗಡೆಯಿಂದ ಯುವತಿಯರನ್ನ ಕರೆಯಿಸಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಡಿಯಲ್ಲಿ ದಾಳಿ ನೇಸಲಾಗಿದೆ. ದಾಳಿಯಲ್ಲಿ ಯುವತಿಯರನ್ನ ರಕ್ಷಿಸಲಾಗಿದೆ. ವೇಶ್ಯವಾಟಿಕೆ ನಡೆಸುತ್ತಿದ್ದ ಮಾಲೀಕ ಮತ್ತು ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. 

ಹಣದ ಆಮಿಷವೊಡ್ಡಿ ಯುವತಿಯರನ್ನ ಕರೆಯಿಸಿ ವೇಶ್ಯವಾಟಿಕೆ ನಡೆಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಆಧಾರ ಮೇರೆಗೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ  ನ್ಯೂಟೌನ್ ಪಿಎಸ್ ಐ ರಮೇಶ್, ಸಿಬ್ಬಂದಿಗಳಾದ ವಿಶಾಲಾಕ್ಷಿ, ಚಿನ್ನಾನಾಯ್ಕ, ರೂಪೇಶ್, ಉಮಾಪತಿ ಮೊದಲಾದವರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close