ಏ.18 ರಂದು ವಿದ್ಯುತ್ ವ್ಯತ್ಯಯ- Power outage on April 18

SUDDILIVE ||SHIVAMOGGA

ಏ.18 ರಂದು ವಿದ್ಯುತ್ ವ್ಯತ್ಯಯ- Power outage on April 18

Power, Outage
   

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ 11 ಕೆವಿ ಮಾರ್ಗದಲ್ಲಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ. 18 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಪಂಡಿತ್ ಲೇಔಟ್, ಊರುಗಡೂರು, ಕಂಟ್ರಿಕ್ಲಬ್ ರಸ್ತೆ, ಎಂ.ಸಿ.ಲೇಔಟ್, ಗೋಶಾಲೆ ರಸ್ತೆ, ಶ್ರೀರಾಮ ಬಡಾವಣೆ, ತೋಟಗಾರಿಕೆ ಇಲಾಖೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಪಾಲಿಕೆ, ವೀರಶೈವ ಕಲ್ಯಾಣ ಮಂದಿರ ಮೊದಲಾದ ಕಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ  ಏ. 18 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಅಂಬೇಡ್ಕರ್ ಭವನದಿಂದ ಮಲ್ಟಿಲೆವಲ್ ಕಾರ್ ಪಾರ್ಕಿಂಗ್‌ವರೆಗೆ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಕಸ್ತೂರಬಾ ರಸ್ತೆ, ಮಹಾನಗರ ಪಾಲಿಕೆ, ವೀರಶೈವ ಕಲ್ಯಾಣ ಮಂಟಪ ಹತ್ತಿರ, ಅಂಬೇಡ್ಕರ್ ರಸ್ತೆ, ನೆಹರು ರಸ್ತೆ, ಬಸವಸದನ ಹತ್ತಿರ, ಕಲ್ಯಾಣ ಜ್ಯುವೆಲರಿ, ವೆಂಕಟೇಶ್ವರ ಸ್ವೀಟ್ ಹೌಸ್, ಶಿವಪ್ಪ ನಾಯಕ ಸರ್ಕಲ್, ಹೂ ಮಾರುಕಟ್ಟೆ, ಗಾಂಧಿಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

Power outage on April 18 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close