SUDDILIVE || SHIVAMOGGA
ಪೋಷಕರ ಭಯದಿಂದ ಮನೆಬಿಟ್ಟು ಬಂದಿದ್ದ ಮಗು ಮರಳಿ ಗೂಡಿಗೆ- Child who ran away from home out of fear of parents returns to nest
ಮನೆಯಲ್ಲಿ ಪೋಷಕರು ಹೊಡೆಯುತ್ತಾರೆ ಭಯದಿಂದ ಶಿವಮೊಗ್ಗದ ಬಸ್ ಸ್ಟ್ಯಾಂಡ್ ಗೆ ಬಂದು ಅಳುತ್ತ ಕುಳಿತಿದ್ದ 10 ವರ್ಷದ ಮಗುವನ್ನ ಅಕ್ಕಪಡೆ ರಕ್ಷಿಸಿ ಪೋಷಕರಿಗೆ ಹಿಂದಿರುಗಿಸಿದ್ದಾರೆ.
ಶಿಕಾರಿಪುರ ಟೌನ್ ವ್ಯಾಪ್ತಿಯಲ್ಲಿ, ತನ್ನ ತಂದೆ ತಾಯಿಯು ಜಗಳವಾಡುತ್ತಿದ್ದಾಗ 10 ವರ್ಷದ ಬಾಲಕಿಯೊಬ್ಬಳು ಹೆದರಿಕೊಂಡು, ತನಗೆ ಏಟು ಬೀಳುತ್ತದೆ ಎಂಬ ಭಯದಿಂದ ಮನೆ ಬಿಟ್ಟು ಬಂದು, ಶಿವಮೊಗ್ಗ ನಗರದ ಬಸ್ ನಿಲ್ದಾಣದಲ್ಲಿ ಒಬ್ಬಳೆ ಇದ್ದಳು.
ಈ ಬಗ್ಗೆ ಕರ್ತವ್ಯ ನಿರತ ಪೊಲೀಸರಿಗೆ ಮಾಹಿತಿ ಬಂದಿದ್ದು, ಕೂಡಲೇ ಅಕ್ಕ ಪಡೆಯು ಸ್ಥಳಕ್ಕೆ ಹೋಗಿ, ಬಾಲಕಿಯನ್ನು ವಿಚಾರಿಸಿ, ಆಕೆಯ ತಂದೆ-ತಾಯಿಯನ್ನು ಶಿಕಾರಿಪುರ ಟೌನ್ ಪೊಲೀಸರ ಮುಖಾಂತರ ಸಂಪರ್ಕಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ. ಮಹಿಳಾ ಠಾಣೆಯಲ್ಲಿ ಬಾಲಕಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲಾಗಿದ್ದು, ನಂತರ ಆಕೆಯ ಪೋಷಕರು ಬಂದು ಮಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
Child who ran away from home out of fear of parents returns to nest
