SUDDILIVE || SHIVAMOGGA
ವಾರಸುದಾರರ ಪತ್ತೆಗಾಗಿ ಮನವಿ-Request to locate heirs
ಹೋಟೆಲ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಸಾವಾಗಿದ್ದು ಅವರ ವಾರಸುದಾರರಿಗಾಗಿ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದೆ.
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ 2ನೇ ಕ್ರಾಸ್ ವೆಂಕಟೇಶ್ವರ ನಿಲಯದ ಬಾಡಿಗೆ ರೂಂ ನಂ. 06 ರಲ್ಲಿ 13 ತಿಂಗಳಿನಿಂದ ವಾಸವಾಗಿದ್ದ ಸುಮಾರು 65 ವರ್ಷದ ರಾಮಚಂದ್ರ ರಾವ್ ಎಂಬುವವರ ಶವ ಪತ್ತೆಯಾಗಿದೆ.
ಪಾರ್ಕ್ ಬಡಾವಣೆಯ ಕಾರ್ತಿಕ್ ಭವನ ಹೋಟೆಲ್ ಹಾಗೂ ಕುವೆಂಪು ರಸ್ತೆಯ ಪಾಕಶಾಲೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಮೃತನ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-221414/ 9916882544 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Request to locate heirs
