SUDDILIVE || SHIVAMOGGA
ಬಿಜೆಪಿಯ ಮುಂದುವರೆದ ಭ್ರಷ್ಠಾಚಾರದ ಚಾಳಿ-ಶಿವಕುಮಾರ್ ವಾಗ್ದಾಳಿ-Shivakumar lashes out at BJP's continued corruption
ಬೆಂಗಳೂರಿನಲ್ಲಿ ಶಿವಮೊಗ್ಗ ಮೂಲದ ಶ್ರೀನಾಥ್ ನಗರಗದ್ದೆಯನ್ನ ಪೊಲೀಸರು ಬಂಧಿಸಿರುವ ಬೆನ್ನಲ್ಲೇ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಬಿಜೆಪಿ ವಿರುದ್ಧ ಮುಗಿದು ಬಿದ್ದಿದೆ.
ಬೆಂಗಳೂರಿನಲ್ಲಿ ಮಲ್ಲೇಶ್ವರಂ ಪೊಲೀಸ್ ವಸತಿಗೃಹದ ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಲು ಯತ್ನಿಸಿದ ಘಟನೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಂ.ಕುಮಾರ್ ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ FIR ದಾಖಲಾಗಿತ್ತು, ನಾಲ್ಕು ದಿನಗಳ ಹಿಂದೆ ಪೊಲೀಸರು ಶಿವಮೊಗ್ಗ ಮೂಲದ ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದರು.
ಶ್ರೀನಾಥ ನಗರಗದ್ದೆ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದರು. ಸಧ್ಯ ಜೈಲಿನಲ್ಲಿದ್ದಾರೆ. ಇವರ ಮತ್ತು ಪಕ್ಷದ ವಿರುದ್ಧ ಶಿವಮೊಗ್ಗದಲ್ಲಿ ಕಾಂಗ್ರೆಸ್ ತಿರುಗಿಬಿದ್ದಿದೆ. ಈ ಬೆನ್ನಲ್ಲೇ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೊಗ್ಗ ಶ್ರೀನಾಥ್ ನಗರಗದ್ದೆಯ ಬಂಧನವನ್ನ ಬಿಜೆಪಿಯ ಮುಂದುವರೆದ ಭ್ರಷ್ಠಾಚಾರದ ಚಾಳಿ ಎಂದು ಬಣ್ಣಿಸಿದ್ದಾರೆ.
Shivakumar lashes out at BJP's continued corruption
