SUDDILIVE || SHIVAMOGGA
SSLC ಫಲಿತಾಂಶ- 96.56% ಮಕ್ಕಳು ಜಿಲ್ಲೆಯಲ್ಲಿ ಪಾಸ್-SSLC results- 96.56% children pass in the district
ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದೆ. ಹೊರಬೀಳುತ್ತಿದ್ದಂತೆ ಪರೀಕ್ಷೆ ಎದುರಿಸಿದ ಮಕ್ಕಳೆಲ್ಲ ತಮ್ಮ ತಮ್ಮ ನೋಂದಣಿ ಸಂಖ್ಯೆಯಂತೆ ಆನ್ ಲೈನ್ ನಲ್ಲಿ ಫಲಿತಾಂಶ ನೋಡಿ ತಮ್ಮ ಹಣೆ ಬರೆಯ ಅಗ್ನಿಪರೀಕ್ಷೆಯನ್ನ ಪರಿಸೀಲಿಸಿಕೊಂಡಿದ್ದಾರೆ.
ಎಂದಿನಂತೆ ದಕ್ಷಿಣ ಕನ್ನಡ 98.40% ತೇರ್ಗಡೆ ಹೊಂದಿ ಪ್ರಥಮ ಸ್ಥಾನ ಪಡೆದರೆ, ಉಡುಪಿ 98% ಅಂಕ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 96.58% ಅಂಕ ಪಡೆದು 6 ನೇ ಸ್ಥನದಲ್ಲಿ ತೃಪ್ತಿ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ 21,692 ಜನ ಮಕ್ಕಳು ಪರೀಕ್ಷೆ ಬರೆದಿದ್ದರೆ, ಇದರಲ್ಲಿ 20945 ಮಕ್ಕಳು ಪಾಸಾಗಿದ್ದಾರೆ. ಕಳೆದ ವರ್ಷ ಶಿವಮೊಗ್ಗ 88.66% ಜನ ಮಕ್ಕಳು ಪರೀಕ್ಷೆ ಪಾಸಾಗಿದ್ದರು. ಈ ವರ್ಷ 8% ಹೆಚ್ಚು ಮಕ್ಕಳು ಪಾಸಾಗಿ ದಾಖಲೆ ಬರೆದಿದ್ದಾರೆ. ಒಟ್ಟು ರಾಜ್ಯದಲ್ಲಿ 770209 ಜನ ಮಕ್ಕಲು ಪರೀಕ್ಷೆ ಬರೆದಿದ್ದರೆ 7,24,796 ಮಕ್ಕಳು ಪಾಸಾಗಿ ರಾಜ್ಯದಲ್ಲಿ ಶೇ.94.1 ಜನ ಮಕ್ಕಳು ಪಾಸಾಗಿದ್ದಾರೆ.
ಅದರಂತೆ ಶಿವಮೊಗ್ಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ಅನಘ 624/625 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರಿಯ ದರ್ಶಿನಿ ಶಾಲೆಯ ಆಂಗ್ಲಭಾಷೆಯ ವಿದ್ಯಾರ್ಥಿನಿ ಕೃತಿ 623/625 ಅಂಕ ತೆಗೆದು ಮೂರನೇ ಸ್ಥಾನ ಪಡೆದಿದ್ದಾರೆ.
ರಾಜ್ಯದಲ್ಲಿ 625/625 ಅಂಕ ಪಡೆದವರು 7 ಜನ ಮಕ್ಕಳು ಪಡೆದರೆ ಕಳೆದ ವರ್ಷ ಈಅಂಕಪಡೆದವರು 22 ಜನ ಮಕ್ಕಳು ಪಡೆದಿದ್ದರು. 624/625 ಅಂಕ ಪಡೆದವರು ಈ ಬಾರಿ 21 ಜನ ಮಕ್ಕಳು ಪಡೆದರೆ ಕಳೆದ ವರ್ಷ 65 ಜನ ಮಕ್ಕಳು ಈ ಅಂಕದಲ್ಲಿ ತೇರ್ಗಡೆಯಾಗಿದ್ದರು. 623/625 ಅಂಕದಲ್ಲಿ ಈ ವರ್ಷ 28 ಜನ ಮಕ್ಕಳು ಪಾಸಾದರೆ ಕಳೆದ ವರ್ಷ 108 ಜನ ಮಕ್ಕಳು ಪಾಸಾಗಿದ್ದರು.
74 ಜನ ಮಕ್ಕಳು 622 ಅಂಕ ಪಡೆದರೆ, 98 ಜನ ಮಕ್ಕಳು 621 ಅಂಕ ಪಡೆದಿದ್ದಾರೆ. 620 ಅಂಕವನ್ನ 150 ಜನ ಮಕ್ಕಳು ಅಂಕ ಪಡೆದಿದ್ದಾರೆ.
SSLC results- 96.56% children pass in the district
