ಆತ್ಮಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ- Sentence for those accused in suicide case

 SUDDILIVE || SHIVAMOGGA

ಆತ್ಮಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ- Sentence for those accused in suicide case    

Sentence, suicide

ಧಮ್ಕಿಹಾಕಿದ ಹಿನ್ನಲೆಯಲ್ಲಿ ದಾಖಲಾಗಿದ್ದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ನ್ಯಾಯಾಲಯ 10 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,23,000/- ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 

ಹುಡುಗಿಗೆ ಸಂದೇಶ ಕಳಿಹಿಸುವ ವಿಷಯದಲ್ಲಿ ಹುಡುಗನಿಗೆ ಧಮ್ಕಿಹಾಕಿ ಒಂದೋ ಜೀವ ಬಿಡಬೇಕು ಇಲ್ಲ ಊರು ಬಿಡಬೇಕು ಎಂದು ಧಮ್ಕಿಹಾಕಿ ಹಾಕಿದ್ದ ಭದ್ರಾವತಿ ತಾಲೂಕು ಮಲ್ಲಾಪುರದ ಗ್ರಾಮದ ನಿವಾಸಿಗಳ ವಿರುದ್ಧ 2021 ರಲ್ಲಿ ಹೊಳೆಹೊನ್ನೂರಿನಲ್ಲಿ ಪ್ರಕರಣ ದಾಖಲಾಗಿತ್ತು. 

ಘಟನೆಯ ವಿವರ

ದಿನಾಂಕ: 05-05-2021 ರಂದು ಸಂಜೆ ಭದ್ರಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ ರುದ್ರೇಶಪ್ಪರವರ ಅಣ್ಣನ ಮಗನಾದ ನವೀನ್ ಕುಮಾರ್ (22 ವರ್ಷ) ಈತನಿಗೆ ಗ್ರಾಮದ ಆರೋಪಿತರಾದ ನಾಗರಾಜ್ ರಾವ್ (26 ವರ್ಷ) ಮತ್ತು ಮಂಜೋಜಿ ರಾವ್ (50 ವರ್ಷ) ರವರು, ನಮ್ಮ ಮನೆ ಹುಡುಗಿಗೆ ಸಂದೇಶ ಕಳುಹಿಸುವುದು ಮಾಡುತ್ತಿದ್ದಿಯಾ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಕೈಗಳಿಂದ ಹೊಡೆದು, ನವೀನ್ ಕುಮಾರ್ ಮೊಬೈಲ್‌ ಅನ್ನು  ತೆಗೆದುಕೊಂಡು, ನೀನು ಜೀವ ತೆಗೆದುಕೊಳ್ಳಬೇಕು ಇಲ್ಲವಾದರೆ ಊರು ಬಿಟ್ಟು ಹೋಗಬೇಕು ಎಂದು ಹೆದುರಿಸಿದ್ದರು, ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ನವೀನ್ ಕುಮಾರ್ ದಿನಾಂಕ: 06-05-2021 ರಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಹೊಳೆಹೊನ್ನುರು ಪೊಲೀಸ್ ಠಾಣೆ  ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಮೋಹನ್ ಜಿ ಪಿಎಸ್ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. 

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:01-04-2026 ರಂದು ಆರೋಪಿತರಿಗೆ ಕಲಂ 341,504,323,306 ಸಹಿತ 34 ಐಪಿಸಿ ರೀತ್ಯಾ 10 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,23,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.

ಮೃತ ನಾಗರಾಜ್ ರವರ ತಂದೆ ಗುಡುಮಲ್ಲಪ್ಪ ರವರಿಗೆ 1,50,000/- ರೂ ಪರಿಹಾರ ನೀಡಲು ಆದೇಶಿಸಿರುತ್ತಾರೆ.

Sentence for those accused in suicide case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close