ಸಂಕೇತ್ ತಂದೆಯೊಂದಿಗೆ ಹಿಂದೂ ಸಮಾಜವಿದೆ-ಶಾಸಕ ಚೆನ್ನಿ- There is a Hindu society with Sanket's father - MLA Chenni

SUDDILIVE || SHIVAMOGGA

ಸಂಕೇತ್ ತಂದೆಯೊಂದಿಗೆ ಹಿಂದೂ ಸಮಾಜವಿದೆ-ಶಾಸಕ ಚೆನ್ನಿ- There is a Hindu society with Sanket's father - MLA Chenni  





ಹತ್ಯೆಯಾದ ಬಾಲಕ ಸಂಕೇತ್ ಸಮಾಧಿ ಒಡೆದ ಪ್ರಕರಣದ ಹಿನ್ನಲೆಯಲ್ಲಿ ಶಾಸಕ ಎಸ್ ಎನ್  ಚನ್ನಬಸಪ್ಪ ಇಂದು ಸೂಳೆಬೈಲಿನ ಹಿಂದೂ ರುದ್ರಭೂಮಿಗೆ ಭೇಟಿ ನೀಡಿ ಅವಲೋಕಿಸಿದರು. ಭಗ್ನಗೊಂಡ ಸಮಾದಿಯನ್ನ ಕುಟುಂಬ ಮತ್ತೆ ಪುನರ್ ಸ್ಥಾಪಿಸಿದ್ದಾರೆ. ಹೀಗಾಗಿ ಶಾಸಕರ ಭೇಟಿ ಮಹತ್ವ ಪಡೆದಿದೆ. 

ಮೃತ ಸಂಕೇತ್ ತಂದೆಗೆ ಬೆನ್ನುತಟ್ಟಿ ಧೈರ್ಯ ತುಂಬಿದ ಶಾಸಕರು ನಿಮ್ಮೊಂದಿಗೆ ನಾವು ಮತ್ತು ಹಿಂದೂ ಸಮಾಜವಿದೆ ಎಂದಿದ್ದಾರೆ. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಸಂಕೇತ್ ಹತನಾದಾಗ ಕ್ಯಾಂಡಲ್ ಮಾರ್ಚ್ ಮಾಡಿದ ಮುಸ್ಲೀಂ ಸಮಾಜ ಇಂದು ಉತ್ತರ ಕೊಡಬೇಕಿದೆ. ನಶೆಯಲ್ಲಿ ಸಂಕೇತ್ ಹತ್ಯೆಗೊಳಗಾದವರು ಜೈಲಿನಲ್ಲಿದ್ದಾರೆ. ಆತನ ಸಮಾದಿಯನ್ನ ಹಾಳು ಮಾಡಿದ ನಶೆಯಾವುದು ಎಂದು ಪ್ರಶ್ನಿಸಿದರು.  

ಫೆ.23 ನೇ ತಾರೀಖು ಒಂದು ಘಟನೆ ನಡೀತು.7 ಜನ ಅಪ್ರಾಪ್ತರು ಕೊಲೆ ಮಾಡಿದ್ದಾರೆ. ಸಮಾಧಿಯನ್ನೂ ಒಡೆದು ಹಾಕುವ ಮಾನಸಿಕತೆ ಮುಸಲ್ಮಾನರಲ್ಲಿ ಇದೆ. ಇದಕ್ಕೆಮುಸಲ್ಮಾನ ಸಮಾಜ ಉತ್ತರ ನೀಡಬೇಕು.ನಶಾದಲ್ಲಿ ಬಂದು ಒಡೆದು ಇದ್ದಾರೆ ಎಂದುಕೊಳ್ಳಬೇಕಾ..? ಎಂದು ಪ್ರಶ್ನಿಸಿದರು. 

ಕೊಲೆ ಮಾಡಿದವರು ಸಿಕ್ಕಿ ಹಾಕಿಕೊಳ್ಳುತ್ತಾರೆ.. ಕೊಲೆ ಮಾಡಿಸಿದವರು ಸಿಕ್ಕಿ ಹಾಕಿಕೊಳ್ಳಲ್ಲ. ಸಮಾಜದವರು ಉತ್ತರ ಕೊಡಬೇಕು. ಮುಸಲ್ಮಾನ ಸಮಾಜವೇ ನೇರ ಹೊಣೆ. ಕ್ಯಾಂಡಲ್ ಹಿಡಿದು ಮೌನಾಚರಣೆ ಮಾಡಿದ್ರೆ ಸರಿಹೋಗುವುದಿಲ್ಲ.  ಹೀಗೆ ಆಗಿದೆ ಅಂತ ನೋಡಬೇಕಲ್ಲ ಎಂದರು. 

ಕುಟುಂಬದವರು ನೆಮ್ಮದಿಯಾಗಿ ಇರುವುದಕ್ಕೆ ಬಿಡೋದಿಲ್ಲ. ಎಂದರೆ ಹೇಗೆ? ಮೂರು ದಿನ ಆಗಿದೆ ಯಾರು ಮಾಡಿದ್ದಾರೆ ಎಂಬುದನ್ನ ಬಂಧಿಸುವುದಿರಲಿ ಪತ್ತೆನೂ ಹಚ್ಚಿಲ್ಲ. ಕೊಲೆ ಮಾಡಿದವರು ಜೈಲಿನಲ್ಲಿ ಇದಾರೆ.‌ ಹಾಗಾದ್ರೆ ಸಮಾಧಿ ಒಡೆದವರು ಯಾರು? ರಕ್ಷಣಾ ಇಲಾಖೆ ಎಚ್ಚೆತ್ತುಕೊಳ್ಳಬೇಕು.. ನಾವು ಸುಮ್ನೆ ಕೂರೋದಿಲ್ಲ.ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು. 

ಕುಟುಂಬದವರ ರಕ್ಷಣೆ ಮಾಡುವವರು ಯಾರು..?  ರುದ್ರಭೂಮಿಗೆ ಸಿಸಿಟಿವಿ ಕ್ಯಾಮರಾ ಹಾಕಬೇಕು, ನಾನೇ ಸ್ವಂತ ಖರ್ಚಿನಲ್ಲಿ ಹಾಕಿಸುತ್ತೇನೆ.  ಕಾಂಪೌಂಡ್ ನಿರ್ಮಿಸುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಾಸಕರಾದ ಶಾರದಾ ಪೂರ್ಯಾ ನಾಯಕ್ ಜೊತೆ ಮಾತಾಡುತ್ತೇನೆ. ನೋವಿನಿಂದ ಬಂದು ಆರೋಪಿಗಳ ಕಡೆಯವರು ಒಡೆದು ಹಾಕಿದ್ರಾ..?

ಪ್ರಕರಣದ ತನಿಖೆ ಮಾಡಿ.. ಬೇಕಾದರೆ ಎನ್ ಐ ಎ ತನಿಖೆಯಾದರೂ ಮಾಡಿಸಿ. ಹರ್ಷನ ಕೊಲೆಯಾದ ನಂತರ ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ ಒತ್ತೆಯಾಗಿದ್ದು.‌ ಬಾಂಬ್ ಬ್ಲಾಸ್ಟ್ ಮಾಡಿದವರು ಶಿವಮೊಗ್ಗದಲ್ಲಿ ಇದಾರೆ.ಸಮಾದಿ ಒಡೆದ ಪ್ರಕರಣದ ಕುರಿತು ಆ ಸಮಾಜದವರು ಯಾಕೆ ಪ್ರತಿ ಕ್ರಿಯೆ ಇಲ್ಲ. ಸರ್ಕಾರ ಕೈಕಟ್ಟಿ ಕುಳಿತ್ರೆ ಪ್ರಯೋಜನವಿಲ್ಲ ಎಂದು ಗುಡುಗಿದರು. 

There is a Hindu society with Sanket's father - MLA Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close