SUDDILIVE || SHIVAMOGGA
15 ವರ್ಷ ಸುಣ್ಣ ಬಣ್ಣ ಕಾಣದ ಸರ್ಕಾರಿ ಉರ್ದು ಶಾಲೆ ಮದುಮಗನಂತೆ ಶೃಂಗಾರಗೊಂಡಿದ್ದು ಹೇಗೆ ಗೊತ್ತ? How do you know that a government Urdu school that hasn't seen whitewash for 15 years is decorated like a bridegroom?
ಶಿವಮೊಗ್ಗ ತಾಲೂಕು ಚೋರಡಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಣ್ಣಬಣ್ಣ ಕಾಣದೆ ಸುಮಾರು 15 ವರ್ಷಗಳೇ ಕಳೆದು ಹೋಗಿವೆ. ಮಳೆ ಗಾಳಿ ಬಿಸಲಿಗೆ ಕಪ್ಪು ಹಿಡಿದಿದ್ದನ್ನ ಕಟ್ಟಡವನ್ನ ಜಗಮಗಿಸುವಂತೆ ಮಾಡಿದ್ದು ಸರ್ಕಾರವಲ್ಲ ಸರ್ಕಾರದ ಆದೇಶದಲ್ಲಿರುವ ಎಸ್ ಡಿ ಎಂಸಿ ಅಧ್ಯಕ್ಷರು.
ಎರಡು ಕೊಠಡಿ, ಒಂದು ಅಡುಗೆ ಮನೆ ಒಂದು ಶೌಚಾಲಯ ಎಲ್ಲವೂ ಸೇರಿದ ಕಟ್ಟಡಗಳಿಗೆ 15ವರ್ಷದಿಂದ ಕಾಣದ ಸುಣ್ಣಬಣ್ಣವನ್ನ 15 ದಿನಗಳಲ್ಲಿ ಮಾಡಿ ಮುಗಿಸಲಾಗಿದೆ. ಸರ್ಕಾರ 15 ಸಾವಿರ ನೀಡಿತ್ತು. ಆ ಹಣ ಸುಣ್ಣ ಬಣ್ಣಕ್ಕೆ ಸಾಕಾಗುತ್ತಿರಲಿಲ್ಲ. ಅದಕ್ಕೆ ಸ್ನೇಹ ಬಳಗ ಮತ್ತು ವಂತಿಕೆಗಳ ಮೂಲಕ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳೆದು ಸುಂದರ ಕಟ್ಟಡವನ್ನಾಗಿಸಾಗಿದೆ.
ಶಾಸಕಿ ಶಾರದ ಪೂರ್ಯನಾಯ್ಕ, ಎಂಎಲ್ ಸಿ ಡಾ.ಧನಂಜಯ ಸರ್ಜಿ ಅವರ ಸಹೋದರ ಈಶ್ವರ್ ಸರ್ಜಿ, ಶಾಲೆಯ ಶಿಕ್ಷಕರು ಹಾಗೂ ಇತರರಿಂದ ಸಂಗ್ರಹ ವಾಗಿದ್ದ 1.03 ಲಕ್ಷ ರೂ. ಸಹ ಈ ಕಾಮಗಾರಿಗೆ ಸಹಕಾರಿಯಾಗಿದ್ದರೂ, ಬಣ್ಣಕ್ಕೆ ಸಾಕಾಗದಿದ್ದಾಗ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸೂಫಿಯನ್ ಅವರ 24 ಸಾವಿರ ರೂ. ಹಣದ ಸಹಾಯದಿಂದ ಈ ಕಟ್ಟಡಕ್ಕೆ ಬಣ್ಣ ಬಳಿಯಲಾಗಿದೆ.
ಒಟ್ಟಿನಲ್ಲಿ 15 ವರ್ಷದಿಂದ ಹಳೆಯ ಕಟ್ಟಡ ನಾಚಿಸುವಂತೆ ಇದ್ದ ಕಟ್ಟಡ ಮಧುಮಗನಂತೆ ಸಜ್ಜುಗೊಂಡಿದೆ. ಸರ್ಕಾರ ಕೇವಲ ಬಡಾಯಿ ಕೊಚ್ಚಿಕೊಳ್ಳುವ ಸ್ಥಿತಿಯಲ್ಲಿದೆಯೇ ವಿನಃ ಕಾಸುಹಾಕಿ ಸೇವೆ ನೀಡುವುದನ್ನ ಮರೆತಂತಿದೆ.
How do you know that a government Urdu school that hasn't seen whitewash for 15 years is decorated like a bridegroom?


