ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ ನಡೆಸಿ ಕೊಲೆ ವೆದರಿಕೆ ಹಾಕಿದ ಆರೋಪಿಗೆ ಶಿಕ್ಷೆ- The accused who trespassed, assaulted and committed murder was sentenced

SUDDILIVE || SHIVAMOGGA

ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ ನಡೆಸಿ ಕೊಲೆ ವೆದರಿಕೆ ಹಾಕಿದ ಆರೋಪಿಗೆ ಶಿಕ್ಷೆ-  The accused who trespassed, assaulted and committed murder was sentenced   

Accused, sentenced

ಅತಿಕ್ರಮಣ ಪ್ರವೇಶ, ಹಲ್ಲೆ, ಕೊಲೆ ಬೆದರಿಕೆ ಹಾಕಿದ್ದ ಆರೋಪಿಗೆ ನ್ಯಾಯಾಲಯ ಒಂದು ಕಾರಾಗೃಹ ವಾಸ ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

ದಿನಾಂಕ:03-10-2021 ರಂದು ಅಹ್ಮದ್ ಷರೀಫ್ 34 ವರ್ಷ ನೇತಾಜಿ ರಸ್ತೆ 1 ನೇ ಕ್ರಾಸ್ ಹಳೆನಗರ ಭದ್ರಾವತಿ ಈತನು ಎದುರು ಮನೆಯ ವಾಸಿ ಮಹಮ್ಮದ್‌ ಸಾಬ್‌ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವರಿಗೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ ಕೊಲೆಬೆದರಿಕೆ ಹಾಕಿದ್ದು, ಈ ಬಗ್ಗೆ ಹಳೇನಗರ ಠಾಣೆಯಲ್ಲಿಪ್ರಕರಣವು ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಈರೇಶ್‌ ಪಿಎಸ್ಐ ರವರು ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಶ್ರೀಮತಿ ರತ್ನಮ್ಮ ಪಿ.ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಮಾನ್ಯ ನ್ಯಾಯಾಧೀಶರು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿ ರವರು ಆರೋಪಿಗೆ 01  ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು ರೂ. 2,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

The accused who trespassed, assaulted and committed murder was sentenced

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close