ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕನ ಶವ ಪತ್ತೆ.- The body of a young man who had gone swimming in the Tunga River was found. . !

SUDDILIVE || SHIVAMOGGA

ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕನ ಶವ ಪತ್ತೆ.-  The body of a young man who had gone swimming in the Tunga River was found!



Tunga, river

ತೀರ್ಥಹಳ್ಳಿ : ಮಂಗಳವಾರ ಸಂಜೆ ಸಮಯದಲ್ಲಿ ತುಂಗಾ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಪ್ರಸಿದ್ಧ ಈಜು ತಜ್ಞರಾದಂತಹ ಈಶ್ವರ ಮಲ್ಪೆ ತುಂಗಾ ನದಿಯಲ್ಲಿ ಹುಡುಕಾಟ ನಡೆಸಿದ್ದರು. ನದಿಗೆ ಇಳಿದಿದ್ದ ಕೆಲವೇ ಅಡಿಯ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ.

ಮಂಗಳವಾರ ಸಂಜೆ ಕಲ್ಲು ಬಂಡೆ ಮೇಲೆ ಮೊಬೈಲ್, ಚಪ್ಪಲಿ, ಬಟ್ಟೆಯನ್ನ ಇಟ್ಟು ಈಜಲು ಹೋಗಿದ್ದ ಯುವಕ ಕಣ್ಮರೆ ಆಗಿದ್ದ. ಅಕ್ಷಯ್ 26 ವರ್ಷ ಮೃತಪಟ್ಟ ದುರ್ಧೈವಿ.

ಸೀಬಿನಕೆರೆಯ ನಿವಾಸಿಯಾಗಿದ್ದ ಅಕ್ಷಯ್ ತೀರ್ಥಹಳ್ಳಿಯಲ್ಲೇ ಕೆಲಸ ಮಾಡಿಕೊಂಡಿದ್ದ. ಮೊಬೈಲ್ ನಂಬರ್ ಬೇರೆಯವರ ಹೆಸರಿನದ್ದು ಎಂದು ತಿಳಿದುಬಂದಿದೆ. 

ಇಂದು ಬೆಳಗ್ಗೆ ಈಶ್ವರ್ ಮಲ್ಪೆ ಮತ್ತು ತಂಡದವರು ತುಂಗಾ ನದಿಯಲ್ಲಿ ಹುಡುಕಾಟವನ್ನು ನಡೆಸಿದ್ದರು. ಯುವಕನ ಶವ ಪತ್ತೆಯಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  The body of a young man who had gone swimming in the Tunga River was found

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close