ಶಿಕಾರಿಗೆ ತಯಾರಿಸಿದ್ದು ಬರೊಬ್ವರಿ 45 ನಾಡಬಾಂಬ್-The hunter was prepared with a 45-caliber grenade.

 SUDDILIVE || HOSANAGARA

ಶಿಕಾರಿಗೆ ತಯಾರಿಸಿದ್ದು ಬರೊಬ್ವರಿ 45 ನಾಡಬಾಂಬ್-The hunter was prepared with a 45-caliber grenade.   

Granade, caliber


ಶಿಕಾರಿ ಆಡಲು ಸಿದ್ದವಾಗಿದ್ದ ಮೂರುಜನರರ ಮೇಲೆ ಖಚಿತ ಮಾಹಿತಿ ಆಧಾರದ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಓರ್ವನನ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ನಾಡಬಾಂಬ್ ಮತ್ತು ಹಿರೋಹೊಂಡ ವಾಹವನ್ನ ವಶಕ್ಕೆ ಪಡೆಯಲಾಗಿದೆ ಇನ್ನಿಬ್ಬರು ದಾಳಿಯಲ್ಲಿ ತಪ್ಪಿಸಿಕೊಂಡಿದ್ದಾರೆ. 

ದಿನಾಂಕ: 19.04.2026 ರಂದು ಹೊಸನಗರ ತಾಲ್ಲೂಕು, ಕೆರೆಹಳ್ಳಿ ಹೋಬಳಿ, ಹರತಾಳು ಗ್ರಾಮದ ಸ. ನಂ. 27 ರಲ್ಲಿ ಕೋಟೆತಾರಿಗಾದಿಂದ ಹರತಾಳು ಹೋಗುವ ಮುಖ್ಯ ರಸ್ತೆಯ ಪಕ್ಕದ ಹರತಾಳು ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಶಿಕಾರಿ ಮಾಡಲು ಮೂವರು ನಾಡಬಾಂಬ್ ನೊಂದಿಗೆ ಸಿದ್ದರಾಗಿದ್ದರು.‌ 

ಖಚಿತ ಮಾಹಿತಿ ಆಧಾರದ ಮೇರೆಗೆ  ಸಿಬ್ಬಂದಿಗಳೊಂದಿಗೆ ಪರಿಶೀಲಿಸಿದಾಗ  ಡಾಕಪ್ಪ ಬಿನ್ ಮಂಜನಾಯ್ಕ, (55), ಕೆ ಹುಣಸವಳ್ಳಿ ಗ್ರಾಮದ ವಾಸಿ, ಹೊಸನಗರ ತಾಲ್ಲೂಕು ಈತನನ್ನ ಬಂಧಿಸಲಾಗಿದೆ. ಎ2 ಆರೋಪಿಯಾದ ಭಾಸ್ಕರ ಬಿನ್ ಮಂಜಪ್ಪ, (55) ಹರತಾಳು ಗ್ರಾಮದ ವಾಸಿ, ಹೊಸನಗರ ತಾಲ್ಲೂಕು (ತಲೆ ಮರಿಸಿಕೊಂಡಿರುತ್ತಾರೆ.) ಮತ್ತೊಬ್ಬ ಎ3 ಆರೋಪಿ ನಾಗರಾಜ ಗೌಡ ಬಿನ್ ಮಂಜಪ್ಪ ಗೌಡ, 53 ವರ್ಷ, ನಂಜುವಳ್ಳಿ ಗ್ರಾಮದ ವಾಸಿ, ಹೊಸನಗರ ತಾಲ್ಲೂಕು (ತಲೆ ಮರಿಸಿಕೊಂಡಿರುತ್ತಾರೆ.) ಇವರುಗಳು ಜೀವಂತ ಸಿಡಿಮದ್ದುಗಳನ್ನು (ನೆಲಬಾಂಬ್) ಬಳಸಿ ಶಿಕಾರಿ ಮಾಡುತ್ತಿರುವ ಸಂದರ್ಭದಲ್ಲಿ ಜೀವಂತ ಸಿಡಿಮದ್ದು (ನೆಲಬಾಂಬ್) ಹಾಗೂ ಹಿರೋ ಹೊಂಡ ಕಂಪನಿಯ ಸಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ: ಕೆಎ 15 ಜೆ-5862 ವಾಹನವನ್ನು ಇಲಾಖಾ ಪರ ವಶಕ್ಕೆ ಪಡೆಯಲಾಗಿದೆ. 

ಪ್ರಕರಣದಲ್ಲಿ ವನ್ಯಜೀವಿ ಬೇಟೆಯಾಡಲು ಬಳಸುತ್ತಿದ್ದ ಜೀವಂತ ನೆಲಬಾಂಬ್ 45 ಸಂಖ್ಯೆ (ಸಿಡಿಮದ್ದು) ಗಳನ್ನು ಜಪ್ತಿ ಮಾಡಿ ಇಲಾಖಾ ವಶಕ್ಕೆ ಪಡೆದಿದ್ದು, ಬಂಧಿಸಿದ ಎ1. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಹೊಸನಗರ ವಲಯದ ವಲಯ ಅರಣ್ಯಾಧಿಕಾರಿಗಳಾದ, ಶ್ರೀ ಅನಿಲ್ ಕುಮಾರ್ ಎಸ್, ಶ್ರೀ ಅನಿಲ್ ಬೆಳ್ಳೆನವರ್, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಭರತ್ ಕುಮಾರ್, ಗಸ್ತು ಅರಣ್ಯ ಪಾಲಕ ಶ್ರೀ ಮಂಜುನಾಥ ಡಿ ಗಸ್ತು ಅರಣ್ಯ ಪಾಲಕ ಶ್ರೀ ಪ್ರಶಾಂತ ಜಿ. ಗಸ್ತು ಅರಣ್ಯ ಪಾಲಕ, ಶ್ರೀ ಪುಟ್ಟಸ್ವಾಮಿ ಕೆ. ವಿ ಗಸ್ತು ಅರಣ್ಯ ಪಾಲಕ ಹಾಗೂ ಇತರೆ ಇಲಾಖಾ ಸಿಬ್ಬಂದಿಯವರು ಭಾಗಿಯಾಗಿರುತ್ತಾರೆ.

The hunter was prepared with a 45-caliber grenade

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close