SUDDILIVE || SHIVAMOGGA
ಶಿವಮೊಗ್ಗದಲ್ಲಿ ಗುಡುಗು ಮಿಂಚು ಸಹಿತ ರಾತ್ರಿ ಮಳೆ- rain with thunder and lightning in Shivamogga at night
ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿಯಿಂದ ಗುಡುಗು ಸಹಿತ ಜೋರು ಮಳೆಯಾಗಿದೆ. ವಿವಿಧೆಡೆ ಇನ್ನೂ ಮಳೆ ಮುಂದುವರೆದಿದೆ. ನಗರದಲ್ಲಿ ಸಾಧಾರಣ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ದಿನದಿಂದ ಬಿಸಿಲಿನ ಅಬ್ಬರ ಜೋರಿತ್ತು. ತಾಪಮಾನವು ಗರಿಷ್ಠ ಹಂತಕ್ಕೆ ತಲುಪಿತ್ತು. ರಾತ್ರಿ ಸುರಿದ ಮಳೆಯಿಂದಾಗಿ ಜನರು ನಿಟ್ಟುಸಿರು ಬಿಡುವಂತಾಗಿದೆ. ತಾಪಮಾನ ತುಸು ತಗ್ಗಿದ್ದರು ಸೆಕೆ ಮುಂದುವರೆದಿದೆ.
ಗುಡುಗು, ಮಿಂಚಿನ ಅಬ್ಬರ
ಶಿವಮೊಗ್ಗದಲ್ಲಿ ರಾತ್ರಿ 11:30ರ ಬಳಿಕ ಮಳೆ ಆರಂಭವಾಗಿದೆ. ಗುಡುಗು, ಮಿಂಚಿನ ಅಬ್ಬರದೊಂದಿಗೆ ಶುರುವಾದ ಮಳೆ ಕೆಲವು ನಿಮಿಷ ಜೋರಾಗಿ ಸುರಿಯಿತು. ಸ್ವಲ್ಪ ಸಮಯದ ಬಳಿಕ ಮಳೆ ತುಸು ತಗ್ಗಿದರು ಗುಡುಗು ಮುಂದುವರೆದಿತ್ತು. ಜಿಲ್ಲೆಯ ಹಲವು ಕಡೆ ರಾತ್ರಿ ಮಳೆಯಾಗಿದೆ.
ರಾಜ್ಯದ ಹಲವೆಡೆ ಮಳೆಯಾಗಿದೆ ಎಂದು ತಿಳಿದು ಬಂದಿಧ ಶಿವಮೊಗ್ಗ ಜಿಲ್ಲೆಯಲ್ಲಿಯು ಮಳೆ ಮುಂದುವರೆದಿದೆ. ತೀರ್ಥಹಳ್ಳಿಯ ಹೆಗ್ಗೋಡು, ತೀರ್ಥಮತ್ತೂರು, ಸಾಲ್ಗಡಿ, ಭಾಂಡ್ಯ ಕುಕ್ಕೆ, ಬೆಜ್ಜವಳ್ಳಿ, ಹಣಗೆರೆಯಲ್ಲಿ ಮಳೆ ಮುಂದುವರೆದಿದೆ. ಭದ್ರಾವತಿ ತಾಲೂಕಿನ ಅರಳಿಕೊಪ್ಪ, ಮಾವಿನಕೆರೆ, ನಾಗತಿಬೆಳಗಲು, ತಡಸ, ದಾಸರಕಲ್ಲಹಳ್ಳಿ, ಕಲ್ಲಿಹಾಳ್, ಅರಕೆರೆ, ಗುಡುಮಘಟ್ಟ ಸುತ್ತಾಮುತ್ತಾ ಮಳೆಯಾಗಿದೆ.
ಶಿವಮೊಗ್ಗ ಸಂತೆ ಕಡೂರಿನಲ್ಲಿ ಅತಿ ಹಚ್ಚು ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ. ತಾಲೂಕಿನ ಕುಂಚೇನಹಳ್ಳಿ, ಅಬ್ಬಲಗೆರೆ, ಶಿಕಾರಿಪುರದ ಮುದ್ದನಹಳ್ಳಿ, ಬಗನಕಟ್ಟೆ, ಸೊರಬದ ಚಿತ್ತೂರು, ಶಿಗ್ಗಾ, ತತ್ತೂರು, ಗೆಂಡ್ಲಾ, ಸಾಗರದ ಕೆಳದಿ ಭಾಗದಲ್ಲಿ ಮಳೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಇನ್ನು ಬೆಳಗ್ಗೆ 7 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 21.5 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಂದಾಜಿಸಲಾಗಿದೆ. ಪ್ರಸ್ತುತ ತಾಪಮಾನ ಗರಿಷ್ಠ 26.8 ಮಿ.ಮೀ ಕನಿಷ್ಠ 19.5 ಸೆಲ್ಸಿಯಸ್ ಇದೆ ಎಂದು ಅಂದಾಜಿಸಲಾಗಿದೆ.
Heavy rain with thunder and lightning in Shivamogga at night
