SUDDILIVE || SHIVAMOGGA
ಮೆಗ್ಗಾನ್ ನಲ್ಲಿ ವಿಜೇಂದ್ರರಿಂದ ಗಾಯಾಳುಗಳ ಭೇಟಿ- Vijendra visits the injured in Meggan
ಶಿವಮೊಗ್ಗದ ಶಿಕಾರಿಪುರದಲ್ಲಿ ಖಾಸಗಿ ಬಸ್ ಪಲ್ಟಿಯಾಗಿ- ಹಲವರಿಗೆ ಗಾಯವಾದ ಹಿನ್ಬಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಮೆಗ್ಗಾನ್ ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 7 ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಬಿ.ವೈ ವಿಜಯೇಂದ್ರ ಈ ವೇಳೆ ಮೆಗ್ಗಾನ್ ವೈದ್ಯರಿಗೆ ಸೂಚಿಸಿದ್ದಾರೆ.
ಬಿ.ವೈ ವಿಜಯೇಂದ್ರಗೆ ಶಾಸಕ ಎಸ್.ಎನ್ ಚನ್ನಬಸಪ್ಪ, ಎಂಎಲ್ಸಿ ಡಾ.ಧನಂಜಯ ಸರ್ಜಿ ಸಾಥ್ ನೀಡಿದರು. ಶಿಕಾರಿಪುರ ಪಟ್ಟಣದ ಕುಮುದ್ವತಿ ಕಾಲೇಜು ಬಳಿ ನಿನ್ನೆ ಬೆಳಿಗ್ಗೆ ಬಸ್ ಅಪಘಾತ ನಡೆದಿದೆ. ಬೈಕ್ ಅಡ್ಡ ಬಂದಿರೋದನ್ನ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿತ್ತು. ಖಾಸಗಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದರು. ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಗಾಯಾಳುಗಳ ಭೇಟಿ ನಂತರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿ, ನಿನ್ನೆ ಶಿಕಾರಿಪುರದಲ್ಲಿ ಬಸ್ ಪಲ್ಟಿಯಾಗಿ 25ಕ್ಕೂ ಹೆಚ್ಚು ಜನ ಗಾಯವಾಗಿತ್ತು.ಸಂಸದ ರಾಘವೇಂದ್ರ ಅವರು ನಿನ್ನೆ ಭೇಟಿ ಮಾಡಿ, ಧೈರ್ಯ ಹೇಳಿದ್ದರು.
ನಾನು ಇಂದು ಬಂದು, ಧೈರ್ಯ ಹೇಳಿದ್ದೇನೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರುಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
Vijendra visits the injured in Meggan
