ಎರಡೂ ಉಪಚುನಾವಣೆಯನ್ನ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ-ಬಿ.ವೈ ವಿಜೇಂದ್ರ ಸವಾಲು-Congress cannot win both by-elections - BY Vijendra challenges

SUDDILIVE || SHIVAMOGGA

ಎರಡೂ ಉಪಚುನಾವಣೆಯನ್ನ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ-ಬಿ.ವೈ ವಿಜೇಂದ್ರ ಸವಾಲು-Congress cannot win both by-elections - BY Vijendra challenges     

Vijendra, challenges

ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಅದರ ಅರ್ಥನೂ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಉಪಚುನಾವಣೆ ಬಂದಾಗ ಮುಖ್ಯಮಂತ್ರಿಗಳು ಬಾಗಲಕೋಟೆಯಲ್ಲಿ ಬೀಡು ಬಿಟ್ಟಿದ್ದನ್ನ ನೀವು ನೋಡಿದ್ದೀರಿ. ರಾಜ್ಯದಲ್ಲಿ ಆಡಳಿತ ಯಂತ್ರ ಈಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ.30 ಶಾಸಕರು ದೆಹಲಿಗೆ ಹೋಗಿ ಕುಳಿತು ಲಾಭಿ ಮಾಡುತಿದ್ದಾರೆ. ಮುಖ್ಯಮಂತ್ರಿಯ ಕುರ್ಚಿಗಾಗಿ ನಡೆಯುತ್ತಿರುವ ಬಡದಾಟದಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ದೂರಿದರು. 

ಬೆಂಗಳೂರು ಸಂಪೂರ್ಣವಾಗಿ ಬಣಗುಡುತ್ತಿದೆ. ಮುಖ್ಯಮಂತ್ರಿಗಳು ಇಲ್ಲ ಉಪಮುಖ್ಯಮಂತ್ರಿಗಳು ಇಲ್ಲ ಅವರ ಕುರ್ಚಿ ಬಡದಾಟ ಹೆಚ್ಚಾಗಿದೆ. ಅವರಿಬ್ಬರ ಬಡಿದಾಟದಲ್ಲಿ ಜನ ಅನುಭವಿಸುತ್ತಿದ್ದಾರೆ ಎಂದು  ಆರೋಪಿಸಿದರು. 

ಮೈತ್ರಿ ವಿಚಾರ

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುತ್ತದೆ ಎಂಬ ವಿಚಾರದಲ್ಲಿ ಪ್ರತಿಕ್ರಿಯಿಸಿದ ರಾಜ್ಯಾಧ್ಯಕ್ಷ ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೆ ಅದರಂತೆ ಒಂದಾಗಿ ರಾಜ್ಯದ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಯಾವ ರೀತಿ ನಿರ್ದೇಶನ ನೀಡುತ್ತಾರೆ ಅದನ್ನು ನಾವು ಫಾಲೋ ಮಾಡುತ್ತೇವೆ ಎಂದರು. 


ಮಹಿಳಾ ಮೀಸಲಾತಿ ವಿಚಾರ


ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇಚ್ಚ ಶಕ್ತಿ ಹಾಗೂ ಅವರ ಸಂಕಲ್ಪದಿಂದ ಮಹಿಳಾ ಮೀಸಲಾತಿ ತರಲು ಮುಂದಾಗಿದ್ದಾರೆ. ಸಾಮಾಜಿಕ ನ್ಯಾಯದ ಜೊತೆಗೆ ರಾಜಕೀಯ ಶಕ್ತಿಯನ್ನು ನೀಡಬೇಕಿದೆ. 

ಎಲ್ಲಾ ಕಡೆಯಿಂದಲೂ 33% ಅವರಿಗೆ ಸ್ಥಾನಗಳನ್ನು ನೀಡಬೇಕು ಎಂಬ ಸದುದ್ದೇಶ ಇಟ್ಟುಕೊಂಡು ಲೋಕಸಭಾ ಅಧಿವೇಶನದಲ್ಲಿ ಮಂಡನೆ ಮಾಡಲಿದ್ದಾರೆ. ಆ ದಿಟ್ಟ ನಿರ್ಧಾರ ಈಗಾಗಲೇ ತೆಗೆದುಕೊಂಡಿದ್ದಾರೆ. ಅದನ್ನ ಅನುಷ್ಠಾನಗೊಳಿಸುವ ದಿಟ್ಟ ನಿರ್ಧಾರದೊಂದಿಗೆ ದಾಪುಗಾಲು ಹಾಕುತ್ತಿದ್ದಾರೆ ಎಂದರು. 

ಮೊಸರಲ್ಲಿ ಕಲ್ಲು ಹುಡುಕಬೇಡಿ

ದೇಶ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಬರಬೇಕಾದರೆ ಭಾರತ 2047ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳು ನಂಬಿದ್ದಾರೆ. ಹಾಗಾಗಿ ಅವರಿಗೆ ರಾಜಕೀಯ ಶಕ್ತಿಯನ್ನು ಕೊಡಬೇಕು ಎಂಬುದಾಗಿ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ನವರು ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಇದೊಂದು ರಾಜಕೀಯ ಗಿಮಿಕ್ ಎಂದು ಹೇಳುತ್ತಿದ್ದಾರೆ. ಈ ರೀತಿ ಹೇಳಿಕೆ ಕೊಡುವುದರ ಮುಖಾಂತರ ದೇಶದ ತಾಯಂದಿರಿಗೆ ಅಪಚಾರ ಎಸಗಿದ್ದಾರೆ ಎಂದು ಆರೋಪಿಸಿದರು.

ಸ್ವತಂತ್ರ ಬಂದು ಐವತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ದೇಶದ ನಾರಿ ಶಕ್ತಿಗಾಗಿ ಯೋಚನೆ ಮಾಡಿರಲಿಲ್ಲ. ಮಾಡುವ ಚಿಂತನೆ ಕೂಡ ಮಾಡಿಲ್ಲ ಹಾಗಾಗಿ ಕಾಂಗ್ರೆಸ್ ಗೆ ಮೀಸಲಾತಿ ಬಗ್ಗೆ ಮಾತನಾಡುವ ಯೋಗ್ಯತೆನೂ ಇಲ್ಲ. ಆ ನಿರ್ಧಾರವನ್ನು ನರೇಂದ್ರ ಮೋದಿ ಅವರು ಮಾಡಿ ದಿಟ್ಟ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅದರಲ್ಲಿ ಈಗ ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಅಂಬೇಡ್ಕರ್ ಜಯಂತಿ

ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಬಹಳ ಅರ್ಥಪೂರ್ಣವಾಗಿ ಬಿಜೆಪಿಯವರು ಆಚರಣೆ ಮಾಡುತ್ತಿದ್ದೇವೆ. ನಿನ್ನೆ ಶಿವಮೊಗ್ಗ ನಗರದ  ಎಲ್ಲಾ ಅಂಬೇಡ್ಕರ್ ಅವರ ಪುತ್ತಳಿ ಸ್ವಚ್ಛತೆ ಮಾಡಲಾಗಿದೆ. ದೀಪಗಳನ್ನು ಪ್ರಜ್ವಲಿಸುವ ಮೂಲಕ ಅವರ ಜನ್ಮದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು. 

ಸ್ವತಂತ್ರ ನಂತರ ಅಂಬೇಡ್ಕರ್ ಅವರಿಗೆ ಗೌರವವನ್ನು ಕೊಡುವ ಕೆಲಸ ಬಿಜೆಪಿ ಮಾಡಿದೆ. ಅಂಬೇಡ್ಕರ್ ಅವರ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಮುಂದಾಳತ್ವವನ್ನು ವಹಿಸಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರನ್ನ ಇಟ್ಟುಕೊಂಡು ಶೋಷಿತ ವರ್ಗದವರ ವೋಟ್ ಬ್ಯಾಂಕಿಗಾಗಿ ದುರುಬಳಕೆ ಮಾಡಿಕೊಂಡಿದೆ ಎಂದು ದೂರಿದರು. 

ಅಂಬೇಡ್ಕರ್ ಅವರ ಬಗ್ಗೆ ಉದ್ದ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ಗರು, ಎರಡು ಬಾರಿ ಚುನಾವಣೆಯಲ್ಲಿ  ಅವರನ್ನು ಸೋಲಿಸಿದೆ ಎಂದು ನೆನಪಿಸಿದರು. 

ಎರಡೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು

ರಾಜ್ಯದಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ವಿಜೇಂದ್ರ ಮುಖ್ಯಮಂತ್ರಿಗಳಾದಿಯಾಗಿ ಕಾಂಗ್ರೆಸ್ ನವರು ಏನೇ ಪುಂಗಿಬಾರಿಸಿದರು ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಪುನರುಚ್ಚರಿಸಿದ್ದಾರೆ. 

ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಆಡಳಿತ ಯಂತ್ರ ಕುಸಿದಿರುವುದು ಹಾಗೂ ಮುಖ್ಯಮಂತ್ರಿಯ ಕುರ್ಚಿ ಗಾಗಿ ಪೈಪೋಟಿಯಲ್ಲಿ ಬೀದಿ ಕಾಳಗ, ಅಭಿವೃದ್ಧಿ ಕೂಡ ರಾಜ್ಯದಲ್ಲಿ ಇಲ್ಲ, ಕಾಂಗ್ರೆಸ್ ಸರ್ಕಾರ ಎಂದರೆ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಹಿಂದುಗಳಿಗೆ ಅಪಮಾನ ಮಾಡುವ ಸರ್ಕಾರವಾಗಿದೆ. 

ಬಹಿರಂಗ ಚರ್ಚೆಗೆ ಬರಲಿ

ಇದರ ಎಲ್ಲದರ ಪರಿಣಾಮ ಎರಡು ಕ್ಷೇತ್ರದಲ್ಲಿ ಬಿಜೆಪಿ ಆಶೀರ್ವಾದ ಮಾಡಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಸವಾಲನ್ನು ಹಾಕುತ್ತೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಲ್ಲಿ ಇದ್ದಾಗ ಏನು ಅಭಿವೃದ್ಧಿ ಕಾರ್ಯಗಳಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಮೈಸೂರಿಗೆ ಏನು ಅಭಿವೃದ್ಧಿ ಕೆಲಸಗಳಾಗಿವೆ.ಈ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿದುರಂತವೆಂದರೆ ಮೈಸೂರಿನಲ್ಲಿ ಎಂ ಎಸ್ ಐ ಎಲ್ ಉಳಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಎಂಎಸ್ಐಎಲ್ ಅನ್ನು ಮಚ್ಚಿ ಅಲ್ಲೊಂದು ಸ್ಟೇಡಿಯಂ ಮಾಡಲು ಹೊರಟಿದ್ದಾರೆ. ಇವರಿಗೆ ಅಭಿವೃದ್ಧಿಯ ಮೇಲೆ ಯಾವುದೇ ಕಾಳಜಿ ಇಲ್ಲ. ನಾಲ್ಕನೇ ತಾರೀಕು ಜನರು ಇದಕ್ಕೆ ಸರಿಯಾಗಿ ಉತ್ತರ ಕೊಡುತ್ತಾರೆ.

Congress cannot win both by-elections - BY Vijendra challenges 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close