ಕಿಂಗ್ ಸಂಕೇತ್ ಎಂದು ಬರೆದಿದ್ದಕ್ಕೆ ಸಮಾದಿ ಹಾಳಾಯಿತಾ? ಕಾಂತೇಶ್ ಗುಡುಗಿದ್ದೇಕೆ?Was the tomb damaged because it was written as King Sanket? Why was Kantesh angry?

 SUDDILIVE || SHIVAMOGGA

ಕಿಂಗ್ ಸಂಕೇತ್ ಎಂದು ಬರೆದಿದ್ದಕ್ಕೆ ಸಮಾದಿ ಹಾಳಾಯಿತಾ? ಕಾಂತೇಶ್ ಗುಡುಗಿದ್ದೇಕೆ?Was the tomb damaged because it was written as King Sanket? Why was Kantesh angry?

Tomb, sanket

ಕಿಂಗ್ ಸಂಕೇತ್ ಎಂದು ಸಮಾದಿ ಕಲ್ಲಿನ ಮೇಲೆ ನಮೂದಿಸಿರುವುದೇ ಸಮಾದಿ ಹಾಳಾಗಲು ಕಾರಣವಾಯಿತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಷ್ಟ್ರಭಕ್ತರ ಬಳಗ ತಿರುಗೇಟು ನೀಡಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಕೆ.ಈ.ಕಾಂತೇಶ್ ಕಿಂಗ್ ಆಗಿಯೇ ಹುಟ್ಟಿದ್ದ ಸಂಕೇತ್ ಕಿಂಗ್ ಆಗಿಯೇ ಸತ್ತಿದ್ದಾನೆ. ಇದು ಪ್ರಜಾಪ್ರಭುತ್ವ ಇರುವ ದೇಶ ಕಿಂಗ್ ಎನ್ನುವ ಪದ ಬಳಕೆ ನಿಷೇಧದಲ್ಲಿ ಇಲ್ಲ. ಕಿಂಗ್ ಎಂದು ಬಳಸಿದರೆ ಎಲ್ಲವನ್ನೂ ನಾಶಪಡಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಂಕೇತ್ ನನ್ನ ಅನ್ಯಕೋಮಿನವರು ಸಾಯಿಸಿದ್ದಾರೆ. ಆತನನ್ನ ಸಮಾದಿಯಲ್ಲಿರಲು ಸಹ ಬಿಡದೆ ಹಾಳು ಮಾಡಿದ್ದಾರೆ. ಎಸ್ಪಿ ಬಳಿ ರಾಷ್ಟ್ರ ಭಕ್ತರ ಬಳಗ ಗಮನಕ್ಕೆ ತಂದಾಗ ತಕ್ಷಣ ಸಮಾದಿಯ ಪುನರ್ ನಿರ್ಮಾಣವಾಗಿದೆ. ಇದು ಸಂತೋಷದ ವಿಷಯ ಎಂದರು. 

ಸತ್ತಮೇಲೂ ಈ ರೀತಿ ಘಟನೆ ನಡೆದಿರುವುದು ಆತನ ಕುಟುಂಬವನ್ನ ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಸಮಾದಿ ಧ್ವಂಸ ಪ್ರಕರಣದಲ್ಲಿ ಯಾರನ್ನೂ ಇದುವರೆಗೆ ಬಂಧಿಸಿಲ್ಲ. ಮುಸ್ಲೀಂ ಓಟ್ ಬ್ಯಾಂಕ್ ನ ತುಷ್ಠೀಕರಕ್ಕಾಗಿ ಸರ್ಕಾರ ಮೃತನ ಕುಟುಂಬಕ್ಕೆ ಹಣ ನೀಡಿ ಸುಮ್ಮನಿರಲು ಬರಲ್ಲ. ಜಿಲ್ಲ ಉಸ್ತುವಾರಿ ಸಚಿವರು ಮೃತನ ಕುಟುಂಬಕ್ಕೆ ಭೇಟಿ ನೀಡಿಲ್ಲ. ಸಂಕೇತ್ ಮನೆಯಲ್ಲಿ ದುಡಿಮೆ ಮಾಡುವರಿಲ್ಲ. ನಮ್ಮ ವಿದ್ಯಾಸಂಸ್ಥೆಯಲ್ಲಿ ಅವರಿಗೆ ಕೆಲಸ ನೀಡುವ ಘೋಷಣೆ ಮಾಡಲಾಗಿದೆ.  ಮುಂದಿನ ವಾರದಲ್ಲಿ ಶಾಲೆಗೆ ಅವರು ಬರಲಿದ್ದಾರೆ ಎಂದರು. 

ಮುಸ್ಲೀಂ ಸತ್ತರೆಕಾಂಗ್ರೆಸ್ ಸರ್ಕಾರವೇ ಧಾವಿಸುತ್ತದೆ. ಆದರೆ ಇಲ್ಲಿ ಸಾಂತ್ವಾನ ಹೇಳುವ ಕೆಲಸವೂ ಮಾಡಿಲ್ಲ. ಹಾಗಾಗಿ ಈಪ್ರಕರಣವನ್ನ ಎನ್ ಐಗೆ ನೀಡಬೇಕು ಎಂದು ಒತ್ತಾಯಿಸಿದರು. 

Was the tomb damaged because it was written as King Sanket? Why was Kantesh angry?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close