SUDDILIVE || SHIVAMOGGA
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬುದ್ದಿಸಲಿದ್ದೇವೆ-ಮುಜಿಬುಲ್ಲಾ-We will give a lesson to Congress in this by-election - Mujibullah
ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಮುದಾಯ ಶೇ.95 ರಷ್ಟು ಮತದಾನವನ್ನ ಹೊಂದಿದ್ದರೂ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ನಿಲ್ಲಿಸದೆ ಇರುವದರ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಸಯ್ಯದ್ ಮುಜಿಬುಲ್ಲ, ಸಚಿವ ಜಮೀರ್ ಅಹಮದ್ ಅವರು ಮತ್ತು ಉಲೇಮಾಗಳು ಕಾಂಗ್ರೆಸ್ ನಲ್ಲಿರುವ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಕಾಂಗ್ರೆಸ್ ಸಚಿವ ಜಮೀರ್ ಮತ್ತು ಉಲೇಮಾರವರನ್ನ ಅವಮಾನಿಸಿತ್ತು. ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಪಕ್ಷದ ಇತರೆ ಮುಖಂಡರು ಅವಮಾನಿಸಿದ್ದಕ್ಕೆ ಕ್ಷಮೆಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಗೆ ಕ್ಷಮೆಕೇಳದಿದ್ದರೆ ಮುಂದಿನ ಚುನಾವಣೆಯಲ್ಲೂ ಬುದ್ದಿಕಲಿಸಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ನೀಡುವ ಅನುದಾನ, ಎಂಎಲ್ ಸಿ ಸ್ಥಾನಗಳನ್ನ ನೀಡದೆ ವಂಚಿಸಲಾಗಿದೆ. ಇದನ್ನ ಕಾಂಗ್ರೆಸ್ ಪಕ್ಷ ಸರಿಪಡಿಸಿಕೊಳ್ಳಬೇಕು.
ಬಾಗಲಕೋಟೆಯಲ್ಲೂ ದಾವಣಗೆರೆಯ ಪರಿಸ್ಥಿತಿಯಿದೆ. ನಾವು ಯಾರಪರವೂ ಇಲ್ಲ ನೋಟಾಕ್ಕೆ ನಮ್ಮ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು, 2000 ರೂ. ಕೊಟ್ಟರು. ಕೋಹಿಲು ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಮನೆ ಧ್ವಂಸವಾಗಿದ್ದರೂ ಪರ್ಯಾಯವ್ಯವಸ್ಥೆ ಆಗಲಿಲ್ಲ. ನಮ್ಮನ್ನ ಬ್ರದರ್ ಎಂದು ಕರೆದರೆ ಸಾಲದು ಕಾರ್ಯದಲ್ಲಿ ಕಾಂಗ್ರೆಸ್ ವಾಗ್ದಾನಗಳನ್ನ ಈಡೇರಿಸಬೇಕು ಎಂದರು.
ಚುನಾವಣೆ ವಿಷಯದಲ್ಲಿ ಅಲ್ಪಸಂಖ್ಯಾತರು ಎಚ್ಚೆತ್ತುಕೊಂಡಿದ್ದಾರೆ. ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರು ದೂರ ಸರಿದಿದ್ದಾರೆ ಎಂಬ ಸಂದೇಶ ನೀಡುವುದು ಇದು ಸೂಕ್ತ ಕಾಲ. ಈ ಉಪಚುನಾವಣೆಯಲ್ಲಿ ಬುದ್ದಿಕಲಿಸಬೇಕಿದೆ. ಡಿಸಿಎಂ ಸ್ಥಾನವನ್ನ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಘೋಷಿಸಬೇಕು ಎಂದು ಸಹ ಒತ್ತಾಯಿಸಿದರು.
ಮುಖಂಡರಾದ ಮೊಹಮದ್ ಸಾದತುಲ್ಲಾ, ನಗಾಧ್ಯಕ್ಷ ಮೊಹಮದ ಗೌಸ್, ಮೊಹಮದ್ ಇರ್ಷಾದ್, ಸುಲೇಮಾನ್ ಶರೀಫ್, ಮೊಹಮದ್ ದಸ್ತಗಿರ್, ನೂರುಲ್ಲಾ ಅನ್ಸದ್ ಅಹಮದ್, ಮುಕ್ತಿಯಾರ್ ಅಹಮದ್, ಶರೀಫ್ ಅತಾವುಲ್ಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
We will give a lesson to Congress in this by-election - Mujibullah
