ನಾವು ಸೂಟ್ ಕೇಸ್ ಇಟ್ಕೊಂಡು ಓಡಾಡಿದರೆ ಬಿಜೆಪಿಯವರು ಕಾಗದ ಇಟ್ಕೊಂಡು ಓಡಾಡುತ್ತಿದ್ದಾರಾ-ಸತೀಶ್ ಜಾರಕಿಹೊಳೆ- If we are walking around with suitcases, is the BJP walking around with papers? - Satish Jarkihole

 SUDDILIVE || SHIVAMOGGA

ನಾವು ಸೂಟ್ ಕೇಸ್ ಇಟ್ಕೊಂಡು ಓಡಾಡಿದರೆ ಬಿಜೆಪಿಯವರು ಕಾಗದ ಇಟ್ಕೊಂಡು ಓಡಾಡುತ್ತಿದ್ದಾರಾ-ಸತೀಶ್ ಜಾರಕಿಹೊಳೆ- If we are walking around with suitcases, is the BJP walking around with papers? - Satish Jarkihole    

Sathish, jarakihole

ನಾವು ಸೂಟಕೇಸ್ ಇಟ್ಟಕೊಂಡು ಓಡಾಡಿದ್ರೆ ಬಿಜೆಪಿಯವರು ಏನು ಕಾಗದ ಇಟ್ಟುಕೊಂಡು ಓಡಾಡುತ್ತಿದ್ದಾರ ಎಂದು ಸಚಿವ ಸತೀಶ್ ಜಾರಕಿಹೊಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರರಿಗೆ ತಿರುಗೇಟು ನೀಡಿದ್ದಾರೆ. 

ಶಿವಮೊಗ್ಗಸಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಏನೇ ಅಂದರು ಮೇ.4 ರವರೆಗೆ ಫಲಿತಾಂಶಕ್ಕಾಗಿ ಕಾಯಬೇಕಿದೆ ಎಂದು ತಿಳಿಸಿದರು.

ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೇಂದ್ರ ಬಾಗಲಕೋಟೆಯಲ್ಲಿ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಸಚಿವರು ಸೂಟ್ ಕೇಸ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಹಣದ ಹೊಳೆ ಹರಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ವಿಜೇಂದ್ರರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು. ನಮ್ಮ ಪಕ್ಷದಿಂದ ಎರಡು ಕ್ಷೇತ್ರ ಗೆಲ್ಲಲು ಪ್ರಯತ್ನ ಮಾಡ್ತಿದ್ದೇವೆ. ನಾವು ಸೂಟ್ ಕೇಸ್ ಇಟ್ಟುಕೊಂಡು ಓಡಾಡಿದ್ರೇ..ಅವರೇನು..? ಕಾಗದ ಇಟ್ಕೊಂಡು ಓಡಾಡ್ತಾರಾ..? ಎಂದು ಹೇಳಿದರು.

ಎಲ್ಲರೂ ಮಾಡೋದು ರಾಜಕೀಯನೇ‌, ಅಂತಿಮವಾಗಿ ಜನ ಆಶೀರ್ವಾದ ಮಾಡಬೇಕು. ಮೇ 4 ರವರೆಗೆ ಕಾಯೋಣ. ಉಪಚುನಾವಣೆ ಸರ್ಕಾರಕ್ಕೆ ಪ್ರತಿಷ್ಟೇ ಏನಲ್ಲ. 143 ಜನ ಶಾಸಕರಿದ್ದೇವೆ. ಅವು ನಮ್ಮದೇ ಸೀಟ್ ಗಳು ಎಂದರು

ಬಿಜೆಪಿ ಸೀಟ್ ಅಲ್ಲ. ನಮ್ಮ ಸೀಟ್ ಉಳಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದೇವೆ. ಅದರಲ್ಲಿ ಏನು ತಪ್ಪಿಲ್ಲ. ಎರಡು ಕಡೆ ಗೇಲ್ತೇವೆ. ಕಾರ್ಯಕರ್ತರು, ಮುಖಂಡರು, ಸಚಿವರು, ಸಿಎಂ, ಡಿಸಿಎಂ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ಚುನಾವಣೆ ಅಂದಾಗ ಎಲ್ಲರೂ ಟಿಕೆಟ್ ಕೇಳ್ತಾರೆ..ಮುಂದೆ ಬೇರೆ ಬೇರೆ ಸ್ಥಾನಮಾನ ಕೊಡಲು ಪಕ್ಷಕ್ಕೆ ಅವಕಾಶ ಇದೆ ಎಂದರು. 

ಎರಡು ವರ್ಷ ನಾನೇ ಸಿಎಂ ಹೇಳಿಕೆ ವಿಚಾರದಲ್ಲಿಯೂ ಪ್ರತಿಕ್ರಿಯಿಸಲು ನಿರಾಕರಿಸದ ಸಚಿವರು, ಅವರೇ ಹೇಳಿದ್ದಾರಲ್ಲ, ಮತ್ತೆ ನಾನು ಹೇಳುವ ಅವಶ್ಯಕತೆ ಇಲ್ಲನಾನು ಕಾಯ್ತಾ ಇದ್ದೇನೆ.. ಡಿಕೆ ಶಿವಕುಮಾರ್ ಸೇರಿದಂತೆ 10 ಜನ ಲೈನ್ ನಲ್ಲಿ ಇದ್ದಾರೆ. ಹಾಗಂತ ಬದಲಾವಣೆ ಮಾಡೋಕೆ ಅಗಲ್ಲ‌. ಅವಕಾಶಕ್ಕಾಗಿ ಕಾಯಬೇಕು ಅಷ್ಟೇ ಎಂದರು.

If we are walking around with suitcases, is the BJP walking around with papers? - Satish Jarkihole

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close