ಹುಲಿಕಲ್ ಘಾಟಿಯ ದುರಂತದಲ್ಲಿ ಎಲ್ರೂ ಸೇಫ್ ಆಗ್ತಾರಾ?Will everyone be safe in the Hulikal Ghat disaster?

SUDDILIVE || SHIVAMOGGA

ಹುಲಿಕಲ್ ಘಾಟಿಯ ದುರಂತದಲ್ಲಿ ಎಲ್ರೂ ಸೇಫ್ ಆಗ್ತಾರಾ?Will everyone be safe in the Hulikal Ghat disaster?     

Safe, everyone


ಶಿವಮೊಗ್ಗದ ಹುಲಿಕಲ್ ಘಾಟ್ ನಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿ ಇಂದಿಗೆ 18 ದಿನಗಳು ಕಳೆದಿವೆ. ಈ 18 ದಿನಗಳಿಂದ ರಸ್ತೆ ಸಂಚಾರ‌ಬಂದ್ ಆಗಿ ಇಲ್ಲಿನ ಸ್ಥಳೀಯರಿಗೆ ಕರಾವಳಿ ಪ್ರದೇಶವನ್ನ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. 

ಕೆಲ ಶಾಲ ಮಕ್ಕಳು ಬಸ್ ನಲ್ಲಿ ಕರಾವಳಿಯಲ್ಲಿರುವ ಶಾಲೆಗೆ ತೆರಳುತ್ತಾರೆ. ಆದರೆ ಹುಲಿಕಲ್ ಘಾಟಿ ರಸ್ತೆ ಸಂಪೂರ್ಣ ಬಂದ್ ಆಗಿರುವುದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಲೇಬರ್ ಮತ್ತು ಗುತ್ತಿಗೆದಾರರ ಸಂಬಂಧಿಕನೇ ಸಾವನ್ನಪ್ಪಿ 18 ದಿನಗಳು ಕಳೆದಿವೆ. ಈ ಘಟನೆಯಲ್ಲಿ ನಡೆದ ಮೂವರ ಸಾವು ಅಸಹಜ ಸಾವು ಎಂದು ದೂರು ದಾಖಲಾಗಿದೆ. 

ಡಾ.ಸಮೀಕ್ಷ ರೆಡ್ಡಿ ಸಾವಿನ ವಿಚಾರ ಏನಾಯಿತು?


ಅಸಹಜ ಸಾವಿಗೆ ಸಚಿವ ಮಧು ಬಂಗಾರಪ್ಪ ಆಕ್ಷೇಪಿಸಿದ್ದಾರೆ. ತನಿಖೆ ಕುರಿತು ವಿಚಾರಿಸಿದ್ದಾರೆ. ಆದರೆ ಅದು ಎಲ್ಲಿ ದಾಖಲಾಗಿತ್ತೋ ಅಲ್ಲೇ ನಿಂತಿದೆ. ಮೂವರ ಬಲಿಯಾದರೂ ಇದುವರೆಗೂ ಯಾರ ಮೇಲೂ ಕ್ರಮ ಜರುಗಿಲ್ಲ. ಇಲ್ಲಿ ಇನ್ನೊಂದು ಪ್ರಕರಣ ನೆನಪಿಸಲೇ ಬೇಕು ಡಾ.ಸಮೀಕ್ಷ ರೆಡ್ಡಿ ಎಂಬ ವೈದ್ಯೆ ಲಯನ್ ಸಫಾರಿಯಲ್ಲಿ ನೀರಾನೆ ದಾಳಿಗೆ ಬಲಿಯಾಗ್ತಾಳೆ ಬಲಿಯಾಗಿ ಇಂದಿವೆ 38 ದಿನ ಕಳೆದಿದೆ. 

38 ದಿನಗಳಲ್ಲಿ ನೀರಾನೆ ಮತ್ತು ಮರಿ ಸಾವನ್ನಪ್ಪಿವೆ. ಇದುವರೆಗೂ ಯಾರ ಮೇಲೂ ಕ್ರಮವಾಗಿಲ್ಲ. ಕಾರಣ ಜೀವಕ್ಕೆ ಬೆಲೆಯಿಲ್ಲ. ಹಣ, ಅಧಿಕಾರ ಇದ್ದವನಿಗೆ ಮಾತ್ರ ಬೆಲೆ. ಕಾನೂನು ಬಡವನಿಗೆ ಹಾಗೂ ಉಳ್ಳವರಿಗೆ ಕಣ್ಣಮುಚ್ಚಾಲೆ ಆಟವಾಡುತ್ತದೆ. ಇದರಂತೆಯೂ ಹುಲಿಕಲ್ ಘಾಟಿಯ ಪ್ರಕರಣವೂ ಸಹ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ಹುಲಿಕಲ್ ಪ್ರಕರಣದಲ್ಲಿ ಎಲ್ರೂ ಸೇಫ್? 

ಗುತ್ತಿಗೆದಾರ ಮೃತಕುಟುಂಬಕ್ಕೆ ಪರಿಹಾರ ನೀಡಿ ಸೇಫ್ ಆಗಿದಂತೆ ಕಂಡುಬಂದಿದೆ. ಡಿಪಾರ್ಟ್ ಮೆಂಟಲ್ ಎನ್ ಕ್ವೈರಿ ಆಗಬೇಕಿದ್ದ ಪ್ರಕರಣದಲ್ಲಿ ಅಧಿಕಾರಿಗಳು ಸೇಫ್ ಆಗಿದ್ದಾರೆ. ಈ ಹಿಂದೆ ಕೈಕಾಲು ಕಳೆದುಕೊಂಡಿದ್ದರೆ ಎನ್ ಕ್ವೈರಿ ಬೀಳುತ್ತಿತ್ತು. ಕೊನೆ ಪಕ್ಷ ಅಬ್ಬೇಪಾರಿಯಾದರೂ ಅಮಾನತ್ತುಗೊಳ್ಳುತ್ತಿದ್ದರು. ಇಲ್ಲಿ ಮೂರು ಜೀವ ಹೋಗಿದೆ. ಮೂರು ಜೀವಕ್ಕೆ ಒಬ್ಬ ಡಿ ಗ್ರೂಪ್ ನೌಕರನೂ ಅಮಾನತ್ತುಗೊಂಡಿಲ್ಲ. 

ಸಚಿವರು ಹುಲಿಕಲ್ ಘಾಟಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಮಾಹಿತಿ ನೀಡುವ ವೇಳೆ ಸಾವು ಸಂಭವಿಸಿದ್ದು ತಮ್ಮ ತಪ್ಪಲ್ಲ ಎಂಬ ದಾಟಿಯಲ್ಲೇ ವಿವರಿಸಿದ್ದಾರೆ.  ಇನ್ನು ಸಚಿವರು ಕಳೆದ 2  ವರ್ಷ 10 ತಿಂಗಳು ಅಧಿಕಾರದಲ್ಲಿದ್ದು, ಸ್ಮಾರ್ಟ್ ಸಿಟಿ ಎನ್ ಕ್ವೇರಿ, ವಿಮಾನನಿಲ್ದಾಣ ನಿರ್ಮಾಣಕ್ಕೆ ತಗುಲಿದ ವೆಚ್ಚದಲ್ಲೂ ಎನ್ ಕ್ವೈರಿ ಬಗ್ಗೆ ಮಾತನಾಡಿದರೂ ಯಾವುದೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಹಾಗೆ ಈ ಮೂರು ಜನರ ಬಲಿ ಪಡೆದ ಘಟನೆ ತಾರ್ಕಿಕ ಅಂತ್ಯ ಕಾಣದೆ ಸಾಯದಿರಲಿ ಎಂಬುದು ನಮ್ಮ‌ಕಾಳಜಿ 

ಆರ್ಥಿಕತೆ ಕುಸಿತ

ಇಲ್ಲಿ ಹುಲಿಕಲ್ ಬಂದ್ ಆಗಿದ್ದ ಕಾರಣ ಯಾವ ನರಪಿಳ್ಳೆನೂ ಓಡಾಡುತ್ತಿಲ್ಲ. ಆರ್ಥಕತೆ ಕುಸಿದು ನೆಗೆದುಬಿದ್ದು ಹೋಗಿದೆ. ಮಾಸ್ತಿಕಟ್ಟಯ ಬಸ್ ನಿಲ್ದಾಣದಲ್ಲಿ ಚಹಕಾಫಿಗೆ ಹೋಟೆಲ್ ಗಳಲ್ಲಿ ನಿಲ್ಲುತ್ತಿದ್ದ ಬಸ್ ಗಳು ಈಗ ನಿಲ್ಲುತ್ತಿಲ್ಲ. ಇನ್ನು ಬಸ್ ಬದಲಿ ವ್ಯವಸ್ಥೆ ಕಲ್ಪಿಸಲಾದರೂ ವಯಸ್ಸಾದವರು ಮೆಟ್ಟಿಲು ಹತ್ತಿ ಬಂದು ಬಸ್ ಹತ್ತೋದು ಕಷ್ಟನೇ. ಬಸ್ ಗಳು ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ. ಇದರಿಂದ ಜನರೂ ಬರುತ್ತಿಲ್ಲ. 

ಹುಲಿಕಲ್ ಘಾಟಿ ಸಂಚಾರ ಜೂನ್ 20 ಕ್ಕೆ ಸಂಚಾರ ಮುಕ್ತ ಮಾಡುವ ಬಗ್ಗೆ ಪಿಡಬ್ಲೂಡಿ ಇಂಜಿನಿಯರ್ ಗಳು‌ ಮೌಖಿಕವಾಗಿ ಹೇಳ್ತಾರೆ. ಅವರ‌ ಮೌಖಿಕ ಭರವಸೆಗಳ ಬಗ್ಗೆ ಸ್ಥಳೀಯರಲ್ಲೇ ನಂಬಿಕೆಯಿಲ್ಲ. ಇನ್ನೂ ನಾಗೋಡಿ ಮೇಲೆ ಕೊಲ್ಲೂರು ಮೂಲಕ ಕುಂದಾಪುರಕ್ಕೆ ಸಂಚರಿಸಲಾಗುತ್ತಿದ್ದರೂ ಮಾಸ್ತಿಕಟ್ಟೆ, ನಗರ, ಯಡೂರು, ನಿಲ್ಸ್ ಕಲ್ ಮೊದಲಾದ ಗ್ರಾಮಸ್ಥರಿಗೆ ಆರೋಗ್ಯ ವಿಚಾರದಲ್ಲಿ ಮಣಿಪಾಲ್ ಗೆ ಹೋಗಲು ಹುಲಿಕಲ್ ಘಾಟಿ ಬೇಕೇ ಬೇಕು‌. ಮಳೆಗಾಲದಲ್ಲಿ ಘಾಟಿಯಲ್ಲಿ ರಸ್ತೆ ನಿರ್ಮಾಣ ಕಷ್ಟನೇ. ಮತ್ತೆ ಈ ಘಾಟಿಯ ಮೂಲಕ ಕರಾವಳಿ ಸಂಪರ್ಕಕ್ಕೆ ನಿಗದಿತ ಸಮಕ್ಕಿಂತ ಹೆಚ್ಚಿನ ಸಮಯ ತೆಗದುಕೊಳ್ಳುವ ಸಾಧ್ಯತೆಯೆ ಹೆಚ್ಚು..

Will everyone be safe in the Hulikal Ghat disaster?  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close