ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿಗಳ ಕಾರ್ಯಾಲಯ ಅಕ್ಷರಶಃ ಧ್ವಂಸ- The Chancellor's office of Kuvempu University was literally destroyed.

 SUDDILIVE || SHIVAMOGGA

ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿಗಳ ಕಾರ್ಯಾಲಯ ಅಕ್ಷರಶಃ ಧ್ವಂಸ- The Chancellor's office of Kuvempu University was literally destroyed.    

Kuvempu, university

Kuvempu, university

Kuvempu, university

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ವಿಶ್ವವಿದ್ಯಾನಿಲಯದ ಗಮನಕ್ಕೆ ಸಾಕಷ್ಟು ಬಾರಿ ತಂದರು ಸ್ಪಂದಿಸದೆ ವಿದ್ಯಾರ್ಥಿ ವಿರೋಧಿ ನೀತಿ  ಅನುಸರಿಸುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ಧ ಇಂದು ಎನ್ ಎಸ್ ಯು ಐ ಬೃಹತ್ ಪ್ರತಿಭಟನೆ ಮಾಡಿ ಕುಲಪತಿಗಳ ಕಚೇರಿಯನ್ನ ಧ್ವಂಸ ಮಾಡಿ  ಕುಲಪತಿ ಶರತ್ ಅನಂತ್ ಕುಮಾರ್ ಅವರನ್ನ  ಮತ್ತಿಗೆ ಹಾಕಿದೆ.

5 ತಿಂಗಳ ಹಿಂದೆ ನಡೆದಿದ್ದ ಒಂದು,  ಮೂರು ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬೇಕು ಏಕಾಏಕಿ ಏರಿಸಿರುವ ಸಾವಿರಾರು ರೂಪಾಯಿ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಇಳಿಸಬೇಕು ಡಿಜಿಟಲ್ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು ಕೂಡಲೇ ಡಿಜಿಟಲ್ ಮೌಲ್ಯಮಾಪನವನ್ನು ಕೈಬಿಡಬೇಕು ಎಙದು ಪ್ರತಿಭಟನೆ ಕಾರರರು ಆಗ್ರಹಿಸಿದ್ದಾರೆ.


ಯು ಸಿ ಎಂ ಎಸ್ ನಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಕುಲಪತಿಗಳನ್ನ ವಜಾಗೊಳಿಸಬೇಕು ಎಂದು  ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಎನ್ ಎಸ್ ಯುಐ ಇಂದು ಕುವೆಂಪು ಶತಮಾನೋತ್ಸವ ಭವನದಲ್ಲಿ ಇರುವ ಕುಲ ಪತಿಗಳ ಕಚೇರಿಯನ್ನು ಅಕ್ಷರಶಃ ಧ್ವಂಸಗೊಳಿಸಿದೆ. ಶತಮಾನೋತ್ಸವ ಭವನದಲ್ಲಿ ಇದ್ದ ಪರಿಕಲ್ಪಗಳು ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ ಕುಲಪತಿಗಳ ಹಾಗೂ ಅವರ ಕೆಳಗೆ ಕೆಲಸ ಮಾಡುವ ಅಧಿಕಾರಿಗಳ ಬೋರ್ಡುಗಳನ್ನು ಕಿತ್ತು ನೆಲಕ್ಕುರುಳಿಸಲಾಗಿದೆ. 

ಈ ವೇಳೆ ತಮ್ಮ ಕಚೇರಿಗೆ ಆಗಮಿಸಿದ ಕುಲಪತಿಗಳಾದ ಶರತ್ ಅನಂತಮೂರ್ತಿಯವರನ್ನು ಸಂಘಟನೆ ಮುತ್ತಿಗೆ ಹಾಕಿದೆ.  ಈ ವೇಳೆ ತಡೆಯಲು ಬಂದ ಸೆಕ್ಯೂರಿಟಿ ಗಾರ್ಡನ್ನು ವಿದ್ಯಾರ್ಥಿಗಳು ಆತನನ್ನು ಆಚೆ ದಬ್ಬಿದ್ದಾರೆ. ಪ್ರತಿಭಟನೆಯಲ್ಲಿ ಎನ್ ಎಸ್ ವೈ ನಗರ ಅಧ್ಯಕ್ಷರಾದ ರವಿಕುಮಾರ್ ಕಾರ್ಯಧ್ಯಕ್ಷರಾದ ರವಿಕುಮಾರ್ ಜಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಭಾಗಿಯಾಗಿದ್ದರು.

The Chancellor's office of Kuvempu University was literally destroyed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close