ನಾಗರೀಕ ಒಕ್ಕೂಟ ಒತ್ತಾಯಿಸಿದಂತೆ ಶುದ್ಧೀಕರಣದ ನೀರು ಸರಬರಾಜು ಆಗಲಿದೆಯೇ?Will purified water be supplied as demanded by the Forums Union?

 SHIVAMOGGA || SHIVAMOGGA

ನಾಗರೀಕ ಒಕ್ಕೂಟ ಒತ್ತಾಯಿಸಿದಂತೆ ಶುದ್ಧೀಕರಣದ ನೀರು ಸರಬರಾಜು ಆಗಲಿದೆಯೇ?Will purified water be supplied as demanded by the Forums Union?

Water, supplied

ನಗರದಲ್ಲಿ ಕಲುಷಿತ ನೀರು ಸರಬರಾಜು ಹೋಗುತ್ತಿರುವ ಬಗ್ಗೆ ಇಂದು ಶಿವಮೊಗ್ಗ ನಾಗರಿಕ ಇತರ ಕ್ಷಣ ವೇದಿಕೆಗಳು ಒಕ್ಕೂಟ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದೆ.

ಶಿಮೊಗ್ಗ ನಗರದ ಕುಡಿಯುವ ನೀರು ಕಳೆದ ಕೆಲವು ದಿನಗಳಿಂದ ಅತ್ಯಂತ ಕಲುಷಿತ ಆಗಿ ಕುಡಿಯಲು ಸಾಧ್ಯವೇ ಇರುವುದಿಲ್ಲ ಎಂಬ ಸ್ಥಿತಿಯಲ್ಲಿ  ಸರಬರಾಜಾಗುತ್ತಿದ್ದು ಇದನ್ನು ಒಕ್ಕೂಟವು ಕಠಿಣ ಶಬ್ದಗಳಿಂದ ಖಂಡಿಸಿದೆ.

ನೀರು ಸರಬರಾಜು ಮಂಡಳಿಯವರ ನಿರ್ಲಕ್ಷದಿಂದ ಈ ರೀತಿ ಕಲುಷಿತ ನೀರು ಸರಬರಾಜಾಗುತ್ತಿದ್ದು ನೀರು ಶುದ್ದೀಕರಣ ಘಟಕದಲ್ಲಿ ಮಳೆಗಾಲಕ್ಕೆ ಮುಂಚಿತವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಪಾಲಿಸಿದೆ ಇರುವುದರಿಂದ ನಿರ್ವಹಣಾ ಕಾರ್ಯ ಸರಿ ಆಗದೆ ಇರುವುದರಿಂದ ಕಲುಷಿತ ನೀರು ಸರಬರಾಜಾಗುತ್ತಿದೆ.

ಆದರೆ ಮಂಡಳಿಯು ಮಳೆ ಅತಿಯಾಗಿ ಬಂದಿದ್ದರಿಂದ ಈ ರೀತಿ ಕಲುಷಿತ ನೀರು ಬಂದಿದೆ ಎನ್ನುವುದು ಸಬುಬಾಗಿ ನೀಡುತ್ತಿದೆ. ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೇ ಹೊರ್ತು ಬೇರೇನು ಅಲ್ಲ ಎಂದು ಒಕ್ಕೂಟ ತೀವ್ರ ವಾಗ್ದಾಳಿ ನಡೆಸಿದೆ. 

ಮಳೆಗಾಲಕ್ಕೆ ಮುಂಚಿತವಾಗಿ ಒಂದು ದಿನ ಇಡೀ ಘಟಕವನ್ನು ಶಟ್ ಡೌನ್ ಆಡಿ ಸಿಲ್ಟ್ ತೆಗೆಯುವ ಕಾರ್ಯ ನಡೆಯಬೇಕು ಶುದ್ಧೀಕರಣ ಘಟಕದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನೇಕ ಮೆಕ್ಯಾನಿಕಲ್ ಉಪಕರಣಗಳು ಶಿಥಿಲವಾಗಿದ್ದು ಸಮರ್ಥಕವಾಗಿ ನಿರ್ವಹಿಸುತ್ತಿಲ್ಲ.  ನೀರಿನಲ್ಲಿರುವ ಮಣ್ಣಿನ ಅಂಶವನ್ನು ಕಡಿಮೆ ಮಾಡಲು ಈ ಉಪಕರಣಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು.  ಹಾಗೆಯೆ ಆಲಂ ರಾಸಾಯನಿಕವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿ ನೀರಿನಲ್ಲಿರುವ ಮಣ್ಣಿನ ಅಂಶವನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆಯಬೇಕು.

ಕುಡಿಯುವ ನೀರಿಗೆ ಸಂಬಂಧಿಸಿದ ವಿಶ್ವ ಸಂಸ್ಥೆಯ ಹಾಗೂ ಭಾರತೀಯ ಕುಡಿಯುವ ನೀರಿನ ಮಾನದಂಡಗಳನ್ನು ಅಳವಡಿಸಿಕೊಂಡು ಪರೀಕ್ಷಾಲಯದಲ್ಲಿ ನೀರಿನ ಪರೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಬೇಕು ನೀರು ಶುದ್ದಿಕರಣ ಘಟಕದಲ್ಲಿ ಇಂತಹ ಹಲವಾರು ಕೊರತೆಗಳು ಎದ್ದು ಕಾಣುತ್ತಿರುವ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.

ಭದ್ರಾವತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಶಿಮೊಗ್ಗದ ವಾರ್ಷಿಕ ಬಳಕೆಯ 3 ಪಟ್ಟು ಹೆಚ್ಚು ಆಲಂಬಳಿಸಲಾಗುತ್ತದೆ. ಆಲಂ ಬಳಕೆಯನ್ನು ಸರಿಪಡಿಸಲು ಶಿವಮೊಗ್ಗದ ನೀರಿನ ಸರಬರಾಜು ಪ್ರಮಾಣ ಭದ್ರಾವತಿಯ ಪ್ರಮಾಣಕ್ಕಿಂತ ಹಲವು ಪಟ್ಟು ಜಾಸ್ತಿ ಇದೆ ಎಂಬ ಪ್ರಮುಖ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು.

ನೀರು ಶುದ್ಧೀಕರಣ ಘಟಕವನ್ನು ಜನಸಂಖ್ಯೆಗೆ ಆಧಾರವಾಗಿ ಎಂಎಲ್‌ಡಿ ಗಳನ್ನು ಹೆಚ್ಚಿಸಬೇಕು ಎನ್ಎಬಿಎಲ್ ಮಾನ್ಯತೆ ಪಡೆದ ನೀರು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಬೇಕು ಪರಿಣಿತ ಸಿಬ್ಬಂದಿಗಳನ್ನು ನೇಮಿಸಬೇಕು ಜನರ ಮೇಲೆ ಆಗುವ ಅನಾರೋಗ್ಯದ ಬಗ್ಗೆ ಅಧಿಕಾರಿಗಳ ನೇರ ಹೊಣೆ ಹೋರಿಸುವಂತಾಗ ಆಗಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

Will purified water be supplied as demanded by the Forums Union?

ರಾಜ್ಯ ಸರ್ಕಾರದ ಗಮನಕ್ಕೆ ತಂದು ಬಜೆಟ್ ಪೂರ್ವದಲ್ಲಿ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಒಕ್ಕೂಟ ಈ ಹಿಂದೆ ಒತ್ತಾಯಿಸಿದರೂ ಯಾವ ಕ್ರಮ ಕೈಗೊಳ್ಳಲಿಲ್ಲ. ಈ ಅನ್ಯಾಯ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯ ಅಗತ್ಯವಿದೆ ಇಂಥ ಸಭೆಯನ್ನು ಕೂಡಲೇ ಆಯೋಜನೆಗೊಳಿಸಬೇಕು ನಾಲ್ಕು ಲಕ್ಷ ನಾಗರಿಕರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಗೆ ಸಮರೋಪದಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close