SUDDILIVE || SHIVAMOGGA
ಅನುಮಾನಸ್ಪ ರೀತಿಯಲ್ಲಿ ರೈಲ್ವೆ ಟ್ರ್ಯಾಕ್ ನಲ್ಲಿ ಯುವತಿಯ ಶವ ಪತ್ತೆ- Young woman's body found suspiciously on railway track
ಅನುಮಾನ ಸ್ಪದವಾಗಿ ಯುವತಿಯ ಮೃತದೇಹವೊಂದ ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ರೈಲಿಗೆ ಸಿಲುಕಿ ಸತ್ತಿರುವುದಾ? ಅಥವಾ ಬೇರೆ ರೀತಿಯ ಸಾವಾಗಿದೆಯಾ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಯುವತಿಯ ಮುಖ ಅಂಗಾತ ಬಿದ್ದಿದ್ದು ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇಂದು ಸಂಜೆ 4-45 ರ ವೇಳೆಗೆ ತಾಳಗುಪ್ಪ ಮೈಸೂರು ರೈಲು ಗಾಡಿಗೆ ಸಿಲುಕಿ ಸಾವನ್ನಪ್ಪಿರ ಬಹುದು ಎಂದು ಶಂಕಿಸಲಾಗಿದೆ. ಲೊಕೊಮೋಟಿವ್ ಇಂಜಿನ್ ಪೈಲೆಟ್ ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ರವೀಂದ್ರ ನಗರ, ಬಸವೇಶ್ವರ ನಗರ ಭೋವಿ ಕಾಲೋನಿ ಬಳಿ 7 ಪಿಜಿ ಹಾಸ್ಟೆಲ್ ಗಳು ಸಹ ಇವೆ. ಸಾವನ್ನಪ್ಪಿರುವ ಯುವತಿ ಹಾಸ್ಟೆಲ್ ನವರ ಅಥವಾ ಬೇರೆ ಕಡೆಯಿಂದ ಬಂದು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ. ಯುವತಿ ಬಳಿ ಮೊಬೈಲ್ ರಿಂಗ್ ಆಗುತ್ತಿದ್ದರು ಮೊಬೈಲ್ ಡಿಸ್ಪ್ಲೇ ಹೋಗಿದ್ದರಿಂದ ಪತ್ತೆಯಾಗಿಲ್ಲ. ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Young woman's body found suspiciously on railway track
