SUDDILIVE || SHIVAMOGGA
ಯಕೃತ್ತಿನಲ್ಲಿ ಕಾಣಿಸಿಕೊಂಡ ಸೋಂಕಿನಿಂದ ಹಿಪೋಟಮಸ್ ಸಾವು-Hippopotamus died from liver infection
ಇಲ್ಲಿನ ಲಯನ್ ಸಫಾರಿಯಲ್ಲಿ ನಿನ್ನೆ ಹಿಪೋಟಮಸ್ (ಹಂಸಿಣಿ) ಸಾವಿನ ಮರಣೋತ್ತರ ಪರೀಕ್ಷೆ ಇಂದು ನಡೆದಿದ್ದು ಪರೀಕ್ಷೆಯ ವರದಿಯನ್ನ ಲಯನ್ ಸಫಾರಿ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಹಂಸಿಣಿಗೆ ಯಕೃತ್ತಿನ (liver) ಸೋಂಕು ಕಾಣಿಸಿಕೊಂಡ ಕಾರಣ ಸಾವನ್ನಪ್ಪಿರುವುದಾಗಿ ಪರೀಕ್ಷೆಯ ವರದಿ ತಿಳಿಸಿದೆ. ಈ ಸೋಂಕು ದೇಹದ ಎಲ್ಲಾ ಅಂಗಾಗಗಳಿಗೆ ಹರಡಿ ಸಿಸ್ಟಮೆಟಿಕ್ ಇನ್ಫೆಕ್ಷನ್ ಉಂಟಾಗಿದೆ.
ಇದಲ್ಲದೆ, ಗರ್ಭಾಶಯಕ್ಕೆ (vaginal) ಹಾನಿಯಾಗದಂತೆ, ಯೋನಿ (vaginal) ಮತ್ತು ಗರ್ಭಾಶಯದ ಬಾಯಿ (cervix) ಭಾಗದಲ್ಲಿ ಸೋಂಕು ಕಂಡುಬಂದಿದೆ.
ಇನ್ನೂ ಕೆಲವು ವಾರಗಳಲ್ಲಿ ಹಂಸಿಣಿಗೆ ಹೆರಿಗೆ ಆಗುವ ಹಂತದಲ್ಲಿದ್ದು, ಸ್ವಲ್ಪ ದಿನಗಳಲ್ಲಿ ಹಿಪೋಟಮಸ್ ಗಂಡು ಮರಿಗೆ ಜನನ ನೀಡಲಿತ್ತು. ಗಂಡು ಭ್ರೂಣವು ಗರ್ಭದಲ್ಲೇ ಸತ್ತಿರುವ ಸಾಧ್ಯತೆ ಇದೆ. ಸಂಗ್ರಹಿಸಿದ ದೇಹದ ದ್ರವಗಳು ಮತ್ತು tissuesಗಳ ಲ್ಯಾಬ್ ಪರೀಕ್ಷೆಯ ಮೂಲಕ ಸೋಂಕಿನ ನಿಖರ ಕಾರಣವನ್ನು ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Hippopotamus died from liver infection
