SUDDILIVE || SHIVAMOGGA
ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಗುರುತು ಪತ್ತೆ-Identity of young woman who committed suicide after being hit by train revealed
ನಿನ್ನೆ ರವೀಂದ್ರ ನಗರ ಮತ್ತು ಬಸವೇಶ್ವರ ನಗರದ ಭೋವಿ ಕಾಲೋನಿಯ ನಡುವೆ ಹಾದು ಹೋಗಿರುವ ರೈಲ್ವೆ ಟ್ರಾಕ್ ನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟ ಯುವತಿಯ ಗುರುತು ಪತ್ತೆಯಾಗಿದೆ.
ವಿನೋಬ ನಗರದ ಹೇಮಶ್ರೀ ಎಂಬ 20 ವರ್ಷದ ಯುವತಿ ನಿನ್ನೆ ಸಂಜೆ 4-45 ಕ್ಕೆ ತಾಳಗುಪ್ಪ-ಮೈಸೂರಿನ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಹೇಮಶ್ರೀ ಜೆಎನ್ ಸಿಸಿ ಸಂಸ್ಥೆಯಲ್ಲಿ ಕಾಮರ್ಸ್ ಪದವಿಯನ್ನ ಅಭ್ಯಾಸಿಸುತ್ತಿದ್ದಳು ಎಂದು ರೈಲ್ವೆ ಪೊಲೀಸರು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ತಾಯಿಯನ್ನ ಕಳೆದುಕೊಂಡ ಹೇಮಶ್ರಿ ಮನಸ್ಸಿಗೆ ಹಚ್ಚಿಕೊಂಡು ಈ ಕೃತ್ಯ ಮಾಡಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಅವಳ ಬಳಿ ಇದ್ದ ಮೊಬೈಲ್ ನಿಂದ ಅವರ ಕುಟುಂಬವನ್ನ ಪೊಲೀಸರಿಗೆ ಪತ್ತೆ ಹಚ್ಚಲಾಗಿದೆ.
Identity of young woman who committed suicide after being hit by train revealed
