ಜಾತ್ಯಾತೀತತೆಯನ್ನ ತೊಲಗಿಸಿ ಹಿಂದೂ ರಾಷ್ಟ್ರವನ್ನಾಗಿಸೋಣ-ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಅಬ್ಬರಿಸಿದ ಹಿಂದೂವಿ ರಾಜ್ಯ ಕಲ್ಪನೆ- the idea of ​​a Hindu state was raised at the Hindu Janajagruti Samavesha

 SUDDILIVE || SHIVAMOGGA

ಜಾತ್ಯಾತೀತತೆಯನ್ನ ತೊಲಗಿಸಿ ಹಿಂದೂ ರಾಷ್ಟ್ರವನ್ನಾಗಿಸೋಣ-ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಅಬ್ಬರಿಸಿದ ಹಿಂದೂವಿ ರಾಜ್ಯ ಕಲ್ಪನೆ-Let's abolish secularism and make it a Hindu nation - the idea of ​​a Hindu state was raised at the Hindu Janajagruti Samavesha

Hindu, state

ಅಲ್ಪಸಂಖ್ಯಾತರಿಗೆ ಅನುದಾನ ಹೆಚ್ಚು ಮಾಡುವ ಹಾಗೂ ವಕ್ಫ್ ಮಂಡಳಿಗೆ ಅಭಿವೃದ್ಧಿಗೆ ಸಹಾಯ ಮಾಡುವ ಸರ್ಕಾರ ದೇಗುಲಗಳ ಅಭಿವೃದ್ಧಿಗೆ ಸಹಾಯಧನ ನೀಡಲ್ಲ. ಹಾಗಾಗಿ ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿಸಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಚಂದ್ರಶೇಖರ ಮೊಗೇರ ತಿಳಿಸಿದರು.

ಅವರು ಬೆಕ್ಕಿನಕಲ್ಮಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡಿದರು. ಸಂವಿದಾನದ ಅಡಿ ನಾವು ಹಬ್ಬ ಹರಿದಿನಗಳಲ್ಲಿ ಮತ್ತು ಮೆರವಣಿಗೆ ನಡೆಸಲಾಗುತ್ತಿಲ್ಲ. ಮಂಡ್ಯ, ನಾಗಮಂಗಲದಲ್ಲಿ ಹಿಂದೂ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಯುತ್ತೆ ಅನ್ಯಧರ್ಮಿಯರ ಮೆರವಣಿಗೆ ನಡೆದರೆ,  ಕಲ್ಲುತೂರಾಟ ನಡೆಯೊದಿಲ್ಲ ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಯುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಸ್ವಾತಂತ್ರ್ಯದ ವೇಳೆ 9 ಕೋಟಿ ಜನಸಂಖ್ಯಾತರಿದ್ದ ಮುಸ್ಲೀಂ ಜನಸಂಖ್ಯೆ ಭಾರದಲ್ಲಿ ಇಂದು 20 ಕೋಟಿ ಜನಸಂಖ್ಯೆ ಆಗಿದೆ. ಇದು ಮುಂದುವರೆದರೆ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಅಪಾಯಕ್ಕೆ ಸಿಲುಕಲಿದ್ದಾರೆ. ಬಾಂಗ್ಲಾ ನುಸುಳುಕೋರರನ್ನ ಹೊರಹಾಕಲು ಹೋದವರ ಮೇಲೆ ಪ್ರಕರಣ ದಾಖಲಾಗುತ್ತದೆ. ಅಕ್ರಮ ಬಾಂಗ್ಲ ಕೋರರನ್ನ ಹೊರಹಾಕಲು ಪ್ರಕರಣ ದಾಖಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಹಲಾಲ್ ವ್ಯಾಪಕವಾಗಿದೆ. ಜಲಾಲ್ ಹಮಾಯತ್ ಸಂಸ್ಥೆಯಿಂದ ಪಡೆಯಬೇಕಿದೆ. ಅದಕ್ಕೆ 50 ಸಾವಿರ ನೀಡಿ ಪಡೆಯಬೇಕಿದೆ. ಇದು ಭಯೋತ್ಪಾದಕ ಸಂಘಟನೆಗೆ ನೀಡಲಾಗುತ್ತದೆ. ಸಂಕೇತ್ ಸಮಾದಿಯನ್ನೂ ಒಡೆದಿರುವ ಬಗ್ಗೆ ಮೊಗೇರ ಪ್ರಸ್ತಾಪಿಸಿರುವುದು ವಿಶೇಷವಾಗಿದೆ. ನಿಜ ಇತಿಹಾಸ ತಿಳಿಸುತ್ತಿಲ್ಲ. ಭಯೋತ್ಪಾದನೆ ಮತಾಂತರ ವಿಷಯಗಳು ಇದೆ. ಜಾತ್ಯಾತೀತ ವ್ಯವಸ್ಥೆಯಿಂದ ಈ ಸಮಸ್ಯೆಯಾಗಿದೆ ಇದನ್ನ ಇತ್ತು ಹಾಕಿ ಹಿಂದೂರಾಷ್ಟ್ರವನ್ನಾಗಿಸಬೇಕಿದೆ ಎಂದರು. 

300 ನ್ಯಾಯಧೀಶರ ಮೇಲೆ ಭ್ರಷ್ಠಾಚಾರವಿದೆ ಇವರು ನ್ಯಾಯ ನೀಡುತ್ತಾರೆ 5 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ನಾವ ಸತ್ತಮೇಲೆ ನ್ಯಾಯ ಪ್ರಕಟವಾಗಲಿದೆ. ಪೊಲೀಸ್ ವ್ಯವಸ್ಥೆ, ಶಿಕ್ಷಣ, ವೈದ್ಯಕೀಯ ವ್ಯವಸ್ಥೆಗಳು ಹದಗೆಟ್ಟಿದೆ ಭ್ರಷ್ಠಾಚಾರ ಶಿಷ್ಠಾಚಾರವಾಗಿದೆ. ಸಾಮಾಜಿಕ ಕ್ರಾಂತಿ ನಡೆಯಬೇಕಿದೆ. 

ಜಾತ್ಯಾತೀತತೆ ಎಂಬ ಪದ 1976 ರಲ್ಲಿ ಇಂದಿರಾಗಾಂಧಿಯವರು ರಾಜಕಾರಣಿಗಳನ್ನ ಜೈಲಿನಲ್ಲಿಟ್ಟು ಸಂವಿಧಾನಕ್ಕೆ 42 ತಿದ್ದುಪಡಿ ತಂದು ಅಸಂವಿಧಾನ ಪದ ಜಾತ್ಯಾತೀತ ಎಂಬ ಪದ ಜಾರಿಗೆ ಬರುತ್ತದೆ. ಇದನ್ನ ಸವಾಲಾಗಿ ಸ್ವೀಕರಿಸಿ ತೆಗೆದುಹಾಕಬೇಕಿದೆ. ಹಿಂದೂ ರಾಷ್ಟ್ರ ಎಂದರೆ ಸತ್ವಗುಣ ಇಟ್ಟುಕೊಂಡವರು ಹಿಂದೂ ಎನ್ನುತ್ತಾರೆ. ಇದು ರಾಜಕಾರಣದ ಪದವಲ್ಲ ಈಶ್ವರ ಸಂಕಲ್ಪಿತ ಪದವೆಂದರು. 

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮಾತನಾಡಿ, ಧರ್ಮ ಆಧಾರಿತವಾಗಿ ಭಾರತ ಇಭ್ಭಾಗವಾಗಿದೆ. ಫೋಟೊ ಹಾಕಿಕೊಳ್ಳುವವರಿಂದ ಭಾರತ ಇಬ್ಭಾಗವಾಗಿದೆ. ಜಾತಿ ವ್ಯವಸ್ಥೆ ನಮ್ಮನ್ನ ಒಡೆಯಲಾಯಿತು. ಚುನಾವಣೆ ಬಂದರೆ ಮತ್ತೆ ಜಾತಿ ಲೆಕ್ಕಚಾರ ಆರಂಭವಾಗುತ್ತದೆ. ಪ್ರತಿಒಬ್ಬರ ಹೆಸರಿನಿಂದ ಮುಂದೆ ಹಿಂದೂ ಎಂಬ ನಾಮಕರಣವಾಗಬೇಕಿದೆ. ಸರ್ ನೇಮ್ ಬದಲಿಸಿ ಹಿಂದೂ ಎಂದು ಹೆಸರಿಸಿಕೊಳ್ಳೋಣ ಎಂದರು.

ಅಲ್ಪಸಂಖ್ಯಾತರಿಗೆ ಅನುದಾನ ಎತ್ತಿಡಲಾಯಿತು. ಇದಕ್ಕೆ ಸಿದ್ದರಾಮಯ್ಯ ನವರು ಕಾರಣ. ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತರಿಂದ ಆಯ್ಜೆಯಾಹಿಲ್ಲ. ಹೇಮಂತ್ ಬಿಸ್ವಾಸ್ ಶರ್ಮ ಮತ್ತು ಯೋಗಿಯಂತಹವರನ್ನ ರಾಜ್ಯದಲ್ಲಿ ಸಿಎಂ ಆಗಿ ಆಯ್ಕೆ ಮಾಡಬೇಕಿದೆ. ಮುಸ್ಲೀಂರನ್ನ ಓಲೈಸುವವರಿಗೆ ಚುನಾವಣೆಯಲ್ಲಿ ಉತ್ತರಿಸಬೇಕಿದೆ ಎಂದರು. 

ಮುಂದಿನ ಸರ್ಕಾರ ತರುವಲ್ಲಿ ಹಿಂದೂಗಳು ಎಂಬುವರು ಆಯ್ಕೆ ಮಾಡಬೇಕು. ಜಾತಿಗಳಲ್ಲ. ಭಗವದ್ಗೀತೆ ಮತ್ತು ರಾಮಾಯಣವನ್ನ ನಮ್ಮ‌ಮಕ್ಕಳಿಗೆ ಹೇಳಿಕೊಡಬೇಕಿದೆ. ನಾನು ಮಂಡ್ಲಿಯಲ್ಲಿ ಹುಟ್ಟಿದೆ.  ಮುಸ್ಲಿಂ ಬಾಹುಳ್ಯದ ಬಡಾವಣೆಯಾಗಿದೆ. ನಮ್ಮಲ್ಲಿ ಕೋಮು ಸಂಘರ್ಷವಾದಾಗ ನಮ್ಮ ಏರಿಯಾದಲ್ಲಿ ಕೆಲವರು ಬಂಧಿತರಾದರು. ಮುಸ್ಲೀಂ‌ಕಡೆಯವರು ವಕೀಲರು ಸ್ವಯಂವಾಗಿ ಬಂದು ಬಿಡುಗಡೆ ಮಾಡಿಸಿದರು. ಆಗ ನಾನು ವಕೀಲ ವೃತ್ತಿಗೆ ಪಾದಾರ್ಪಣೆ ಮಾಡಿದರು. ನಮ್ಮ ಕ್ಷೇತ್ರದಲ್ಲಿ ನಾನು ನಮ್ಮ ಹಿಂದೂ ಬಂಧುಗಳನ್ನ ಕಾನೂನಾತ್ಮಕವಾಗಿ ರಕ್ಷಣೆ ಮಾಡಿರುವುದಾಗಿ ಹೇಳಿದರು. 

ನಮ್ಮ ಸುತ್ತಮುತ್ತಲಿನ ಆಗುಹೋಗುವಮಗಳ ಬಗ್ಗೆ ಹಿಂದೂಗಳು ಒಗ್ಗಟ್ಟಾಗಬೇಕು. ಆಗ ಹಿಂದೂ ರಾಷ್ಟ್ರ ಕಲ್ಪನೆ ಸಾಧ್ಯವಾಗಲಿದೆ ಎಂದರು. 

ಕಾರ್ಯಕ್ರಮದಲ್ಲಿ ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ದಿನಕರ್, ಕೋಟೆ ದುರ್ಗಪರಮೇಶ್ವರಿ ದೇವಸ್ಥಾನದ ಶಂಕರಾನಂದ ಜೋಯಿಸ್ ಉಪಸ್ಥಿತರಿದ್ದರು. 

the idea of ​​a Hindu state was raised at the Hindu Janajagruti Samavesha

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close